ನಿಮ್ಮೆಲ್ಲ ಕೆಲಸಗಳನ್ನು ಬದಿಗಿರಿಸಿ ಹಾಸನಕ್ಕೆ ಹೊರಡಿ, ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗಿದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 28, 2021 | 4:21 PM

ಇಂದಿನಿಂದ 12 ದಿನಗಳ ಕಾಲ ತೆರೆದಿರುವ ದೇವಸ್ಥಾನವು ಬಲಿಪಾಢ್ಯಮಿಯ ಮಾರನೇ ದಿನ ಮುಚ್ಚಲಾಗುತ್ತದೆ. ಭಕ್ತರಿಗೆ ಈ 12 ದಿನಗಳಲ್ಲಿ ಮಾತ್ರ ದೇವಿಯ ದರ್ಶನ ಭಾಗ್ಯ ಸಿಗುತ್ತದೆ. ದೇಗುಲ ತೆರೆದಿರುವವರೆಗೆ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ.

ಹಾಸನದಲ್ಲಿರುವ ಹಾಸನಾಂಬೆ ದೇವಸ್ಥಾನವನ್ನು ಪ್ರತಿವರ್ಷದಂತೆ ಈ ಬಾರಿಯೂ ಅಶ್ವಯುಜ ತಿಂಗಳು ಹುಣ್ಣಿಮೆಯ ಬಳಿಕ ಬರುವ ಮೊದಲ ಗುರುವಾರದಂದು ಶ್ರೀ ನಿರ್ಮಲಾನಂದ ಸ್ವಾಮೀಜಿಗಳ ದಿವ್ಯ ಸಮ್ಮುಖದಲ್ಲಿ ಮಧ್ಯಾಹ್ನ ಸರಿಯಾಗಿ 12 ಗಂಟೆ 17 ನಿಮಿಷಕ್ಕೆ ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ಈ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ನಿಮಗೆಲ್ಲ ಗೊತ್ತಿರುವ ಹಾಗೆ ಹಾಸನಾಂಬೆ ದೇವಸ್ಥಾನವು ಪ್ರತಿವರ್ಷ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಕೇವಲ 12 ದಿನಗಳಿಗೆ ಮಾತ್ರ ತೆರೆಯಲ್ಪಡುತ್ತದೆ. ಕೋವಿಡ್​ ಪಿಡುಗಿನಿಂದಾಗಿ ಕಳೆದ ವರ್ಷ ದೇವಸ್ಥಾನದ ಬಾಗಿಲನ್ನು ತೆರೆದಿರಲಿಲ್ಲ ಎನ್ನವುದನ್ನು ಗಮನಿಸಬೇಕು. ಗುರುವಾವರದಂದು ದೇಗುಲದ ಗರ್ಭಗುಡಿಯನ್ನು ತೆರೆದಾಗ ಕಳೆದ ವರ್ಷ ಹೊತ್ತಿಸಿದ್ದ ದೀಪ ಉರಿಯುತಿತ್ತು. ವರ್ಷವಿಡೀ ದೇವಸ್ಥಾನ ಮುಚ್ಚಿದ್ದರೂ ದೀಪವು ಒಂದು ವರ್ಷಕಾಲ ನಂದದೆ ಉರಿಯುವುದು ಹಾಸನಾಂಬೆಯ ಮಹಿಮೆ ಮತ್ತು ಚಮತ್ಕಾರ ಎಂದು ಭಕ್ತರು ಹೇಳುತ್ತಾರೆ.

ಇಂದಿನಿಂದ 12 ದಿನಗಳ ಕಾಲ ತೆರೆದಿರುವ ದೇವಸ್ಥಾನವು ಬಲಿಪಾಢ್ಯಮಿಯ ಮಾರನೇ ದಿನ ಮುಚ್ಚಲಾಗುತ್ತದೆ. ಭಕ್ತರಿಗೆ ಈ 12 ದಿನಗಳಲ್ಲಿ ಮಾತ್ರ ದೇವಿಯ ದರ್ಶನ ಭಾಗ್ಯ ಸಿಗುತ್ತದೆ. ದೇಗುಲ ತೆರೆದಿರುವವರೆಗೆ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಶಕ್ತಿದೇವತೆಗೆ ಸಮರ್ಪಿಸಲಾಗಿರುವ ಹಾಸನಾಂಬೆಯ ಜಾತ್ರೆಯಲ್ಲಿ ಕರ್ನಾಟಕವೂ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ.

ಹಾಸನಾಂಬೆಯ ಗುಡಿ ಕುರಿತಂತೆ ಅನೇಕ ದಂತಕತೆಗಳಿವೆ. ಅಸಲಿಗೆ ದೇವಸ್ಥಾನ ಅಸ್ತಿತ್ವಕ್ಕೆ ಬಂದಿದ್ದು 12 ನೇ ಶತಮಾನದಲ್ಲಿ ಎಂದು ಹೇಳಲಾಗುತ್ತದೆ. ಜಾತ್ರೆ ಮುಗಿದ ನಂತರ ದೇಗುಲದ ಗರ್ಭಗುಡಿಯಲ್ಲಿ ಶಕ್ತಿದೇವತೆಗೆ ಹೂವು-ಹಣ್ಣು ಮತ್ತು ನೈವೇದ್ಯ ಸಮರ್ಪಿಸುವ ಮೊದಲು ದೀಪವನ್ನು ಹೊತ್ತಿಸಲಾಗುತ್ತದೆ.

ಆಗಲೇ ಹೇಳಿದಂತೆ ಅಂದು ಹೊತ್ತಿಸುವ ದೀಪ ವರ್ಷವಿಡೀ ಅಂದರೆ ಬರುವ ವರ್ಷ ಪುನಃ ಗುಡಿಯ ಬಾಗಿಲು ತೆಗೆಯುವವರೆಗೆ ಹಾಗೆಯೇ ಉರಿಯುತ್ತಿರುತ್ತದೆ. ಅಮ್ಮನ ಅಡಿಗಳಿಗೆ ಸಲ್ಲಿಸಿದ ಹೂವು ಸಹ ಒಂದು ವರ್ಷದವರೆಗೆ ತಾಜಾತನವನ್ನು ಕಾಯ್ದುಕೊಂಡಿರುತ್ತವೆ. ಇದು ಪವಾಡವಲ್ಲದೆ ಮತ್ತೇನು?

ಇದನ್ನೂ ಓದಿ:   Viral Video: ಕುಚ್ ಕುಚ್ ಹೋತಾ ಹೈ ಚಿತ್ರದ ಹಾಡಿಗೆ ಅಮ್ಮ, ಅತ್ತೆಯ ಜೊತೆಗೂಡಿ ಸಕತ್ ಸ್ಟೆಪ್ ಹಾಕಿದ ವರ; ವಿಡಿಯೊ ನೋಡಿ

Published on: Oct 28, 2021 04:12 PM