ಪ್ರಧಾನಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಪತ್ತೆ ಕೇಸ್: ಆರೋಪಿಗಳ ಸಂಚು ಬಯಲು
ಪ್ರಧಾನಿ ಮೋದಿ ಸಂಚಾರ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಪ್ರಕರಣ ಸಂಬಂಧ ಆರೋಪಿಗಳ ಸಂಚು ಬಯಲಾಗಿದೆ. ಆರ್ಟ್ ಆಫ್ ಲಿವಿಂಗ್‌ಗೆ ಮೋದಿ ಬರಬಾರದೆಂದು ಪ್ಲಾನ್ ಮಾಡಿದ್ದು, ಪೊಲೀಸರಿಗೆ ಸುಳಿವು ಸಿಗದಂತೆ ಆರೋಪಿಗಳು ಸಂಚು ರೂಪಿಸಿದ್ದರು ಎಂಬ ವಿಚಾರ ಟಿವಿ9ಗೆ ಪೊಲೀಸ್ ಉನ್ನತ ಮೂಲಗಳಿಂದ ಗೊತ್ತಾಗಿದೆ. ಈ ನಡುವೆ ಆರೋಪಿಗಳಿಗಾಗಿ ಶೋಧ ಮುಂದುವರಿದಿದ್ದು, ಅವರಿಗೆ ಜಿಲೆಟಿನ್ ಸಿಕ್ಕಿದ್ದೆಲ್ಲಿಂದ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.
ಬೆಂಗಳೂರು, ಮೇ 15: ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿಗಳು ಪತ್ತೆ ಪ್ರಕರಣ ಸಂಬಂಧ ಆರೋಪಿಗಳ ಸಂಚು ಏನಾಗಿತ್ತು ಎಂಬುದೀಗ ಬಹಿರಂಗಗೊಂಡಿದೆ. ಆರ್ಟ್ ಆಫ್ ಲಿವಿಂಗ್ ಸ್ಥಳಕ್ಕೆ ಮೋದಿ ಬರಲೇಬಾರದು ಎಂದು ಆರೋಪಿಗಳು ಪ್ಲ್ಯಾನ್ ಮಾಡಿದ್ದರು. ಅಲ್ಲದೆ ಈ ಬಗ್ಗೆ ಪೊಲೀಸರಿಗೆ ಯಾವುದೇ ಲೀಡ್ ಸಿಗದ ಹಾಗೆ ಸಂಚು ರೂಪಿಸಿದ್ದರು ಎಂದು ಟಿವಿ9ಗೆ ಪೊಲೀಸ್ ಉನ್ನತ ಮೂಲಗಳು ತಿಳಿಸಿವೆ. ಇನ್ನು ಪ್ರಕರಣ ಸಂಬಂಧ ಈವರೆಗೂ ಬೆಂಗಳೂರು ದಕ್ಷಿಣ ಪೊಲೀಸರು ನೂರಾರು ಜನರ ವಿಚಾರಣೆ ನಡೆಸಿದ್ದು, ಆರೋಪಿಗಳ ಪತ್ತೆಯೇ ಪೊಲೀಸರಿಗೆ ಸವಾಲಾಗಿ ಮಾರ್ಪಟ್ಟಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: May 15, 2026 04:04 PM
Loading...
Unable to load recommendations.
Follow Us
