Genelia Dsouza: ಕಿಚ್ಚ ಸುದೀಪ್​ ಚಿತ್ರಕ್ಕೆ ಬೆಂಬಲ ನೀಡಲು ಗಂಡನ ಜೊತೆ ಬಂದ ಜೆನಿಲಿಯಾ ಡಿಸೋಜಾ

| Updated By: ಮದನ್​ ಕುಮಾರ್​

Updated on: Jul 26, 2022 | 11:27 AM

Vikrant Rona | Kichcha Sudeep: ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳ ಜೊತೆ ಕಿಚ್ಚ ಸುದೀಪ್​ ಅವರಿಗೆ ಸ್ನೇಹ ಇದೆ. ಅವರೆಲ್ಲರೂ ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಸಾಥ್​ ನೀಡಿದ್ದಾರೆ.

ನಟ ಕಿಚ್ಚ ಸುದೀಪ್ (Kichcha Sudeep)​ ಅಭಿನಯದ ‘ವಿಕ್ರಾಂತ್​ ರೋಣ’ ಸಿನಿಮಾ ಹಿಂದಿಗೂ ಡಬ್​ ಆಗಿ ತೆರೆ ಕಾಣುತ್ತಿದೆ. ಹಾಗಾಗಿ ಮುಂಬೈನಲ್ಲಿ ಭರ್ಜರಿಯಾಗಿ ಪ್ರೀ-ರಿಲೀಸ್​ ಇವೆಂಟ್​ ಮಾಡಲಾಗಿದೆ. ಇದರಲ್ಲಿ ಖ್ಯಾತ ನಟಿ ಜೆನಿಲಿಯಾ ಡಿಸೋಜಾ (Genelia Dsouza) ಅವರ ಪತಿ ರಿತೇಶ್​ ದೇಶಮುಖ್​, ಸಲ್ಮಾನ್​ ಖಾನ್​ ಮುಂತಾದವರು ಭಾಗಿ ಆಗಿದ್ದರು. ಕನ್ನಡ ಚಿತ್ರರಂಗದ ಜೊತೆ ಜೆನಿಲಿಯಾ ಹಾಗೂ ರಿತೇಶ್​ (Riteish Deshmukh) ಅವರಿಗೆ ನಂಟು ಇದೆ. ಸುದೀಪ್​ ಮತ್ತು ರಿತೇಶ್​ ಬಹುಕಾಲದಿಂದ ಸ್ನೇಹಿತರು. ಆ ಕಾರಣಕ್ಕಾಗಿ ಅವರು ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ಸಾಥ್ ನೀಡಿದ್ದಾರೆ.

 

Follow us on