German Hangers: ಕಾಶಿ ವಿಶ್ವನಾಥ ದೇವಸ್ಥಾನ ಆವರಣಕ್ಕೆ ಇಷ್ಟರಲ್ಲೇ ಜರ್ಮನ್ ಹ್ಯಾಂಗರ್ ಹೊದಿಕೆ, ಭಕ್ತಾದಿಗಳಿಗೆ ಬಿಸಿಲಿನ ತಾಪದಿಂದ ಸಿಗಲಿದೆ ರಿಲೀಫ್!

|

Updated on: Apr 26, 2023 | 8:07 AM

ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜರ್ಮನ್ ಹ್ಯಾಂಗರ್ ಗಳನ್ನು ಅಳವಡಿಸುತ್ತಿರುವ ಯೋಜನೆ ಭಕ್ತರಲ್ಲಿ ಸಂತಸವುಂಟು ಮಾಡಿದೆ ಮತ್ತು ಅವರು ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ವಾರಣಾಸಿ: ನಗರದ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ (Kashi Vishwanath Temple) ದಿನಂಪ್ರತಿ ಸಹಸ್ರಾರು ಭಕ್ತರು ಆಗಮಿಸಿ ಭಗವಾನ್ ಶಿವನಿಗೆ (Bhagwan Shiva) ಪೂಜೆ ಸಲ್ಲಿಸುತ್ತಾರೆ. ಆದರೆ ವಿಶ್ವನಾಥನ ಸನ್ನಿಧಿ ತಲುಪಲು ಅವರು ಪಡುವ ಪಡಿಪಾಟಲು ಅಷ್ಟಿಷ್ಟಲ್ಲ. ಬೇಸಿಗೆಯಲ್ಲಿ ಸುಡುವ ಬಿಸಿಲು, ಮಳೆಗಾಲದಲ್ಲಿ ರಭಸದಿಂದ ಸುರಿವ ಮಳೆ ಮತ್ತು ಜೋರು ಗಾಳಿ ಭಕ್ತರನ್ನು ಕಂಗೆಡುವಂತೆ ಮಾಡುವುದು ಸುಳ್ಳಲ್ಲ. ಮುಂಬರುವ ದಿನಗಳಲ್ಲಿ ಅವರು ಕಷ್ಟ ದೂರವಾಗುವ ಸ್ಥಿತಿ ನಿರ್ಮಾಣವಾಗಲಿದೆ. ಕೆಲವೇ ದಿನಗಳಲ್ಲಿ ಭಕ್ತರನ್ನು ಬಿಸಿಲು, ಮಳೆ ಮತ್ತು ಗಾಳಿಯಿಂದ ರಕ್ಷಿಸಲು ದೇವಸ್ಥಾನದ ಅವರಣ ಮತ್ತು ಮುಂಭಾಗದಲ್ಲಿ ಜರ್ಮನ್ ಹ್ಯಾಂಗರ್ ಗಳನ್ನು (German Hanger) ಅಳವಡಿಸಲಾಗವುದು ಎಂದು ಕಾಶಿ ವಿಶ್ವನಾಥ ದೇವಸ್ಥಾನದ ಮುಖ್ಯ ಕಾರ್ಯನಿವರ್ಹಣಾಧಿಕಾರಿ ಸುನೀಲ್ ವರ್ಮ ಹೇಳುತ್ತಾರೆ.

‘ಭಕ್ತರು ಪಡುವ ಬವಣೆಯನ್ನು ನಾವು ಗಮನಿಸುತ್ತಿದ್ದೇವೆ. ಜರ್ಮನ್ ಹ್ಯಾಂಗರ್ ಗಳನ್ನು ಅಳವಡಿಸಿ ಅವರಿಗೆ ಗಾಳಿ, ಮಳೆ ನೀರಿನಿಂದ ರಕ್ಷಣೆ ಒದಗಿಸುವ ಕೆಲಸ ಪ್ರಾರಂಭಿಸಲಿದ್ದೇವೆ. ಲಖನೌದಲ್ಲಿರುವ ಕಂಪನಿಯೊಂದಕ್ಕೆ ಜರ್ಮನ್ ಹ್ಯಾಂಗರ್ ಗಳನ್ನು ಅಳವಡಿಸುವ ಹೊಣೆಗಾರಿಕೆ ನೀಡಲಾಗುವುದು,’ ಎಂದು ಸುನೀಲ್ ವರ್ಮ ಹೇಳುತ್ತಾರೆ.

ಇದನ್ನೂ ಓದಿ:   2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್​​ ತಡೆಯಾಜ್ಞೆ ನೀಡಿಲ್ಲ: ಎಜಿ ಪ್ರಭುಲಿಂಗ ನಾವದಗಿ

ದೊಡ್ಡ ಸಮಾರಂಭಗಳಲ್ಲಿ, ಚುನಾವಣಾ ಪ್ರಚಾರ ಸಮಾರಂಭಗಳಲ್ಲಿ ನೀವು ಬೃಹತ್ ಗಾತ್ರದ ಟೆಂಟ್ ಗಳನ್ನು ನೋಡಿರಬಹುದು. ಅವುಗಳಲ್ಲಿ ಹೆಚ್ಚಿನವು ಜರ್ಮನ್ ಹ್ಯಾಂಗರ್ ಗಳು.

ಜರ್ಮನ್ ಹ್ಯಾಂಗರ್

ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಜರ್ಮನ್ ಹ್ಯಾಂಗರ್ ಗಳನ್ನು ಅಳವಡಿಸುತ್ತಿರುವ ಯೋಜನೆ ಭಕ್ತರಲ್ಲಿ ಸಂತಸವುಂಟು ಮಾಡಿದೆ ಮತ್ತು ಅವರು ನಿರ್ಧಾರವನ್ನು ಸ್ವಾಗತಿಸಿದ್ದಾರೆ.

‘ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸುಡುವ ಬಿಸಿಲಿಂದ ರಕ್ಷಣೆ ಬೇಕಿದೆ. ಬಿಸಿಲಿನಿಂದಾಗಿ ನಾವು ಬಸವಳಿಯುತ್ತಿದ್ದೇವೆ ಮತ್ತು ನಿತ್ರಾಣಗೊಳ್ಳುತ್ತಿದ್ದೇವೆ. ಜರ್ಮನ್ ಹ್ಯಾಂಗರ್ ಗಳನ್ನು ಹೊದಿಸಿ ಜನರಿಗೆ ನೆರಳು ಸಿಗವಂತೆ ಮಾಡಹೊರಟಿರುವುದು ನಿಜಕ್ಕೂ ಸ್ವಾಗತಾರ್ಹ,’ ಎಂದು ಒಬ್ಬ ಭಕ್ತ ಹೇಳುತ್ತಾರೆ.

ಇದನ್ನೂ ಓದಿ:  Kerala Vande Bharat Express : ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಪ್ರಧಾನಿ ಮೋದಿ ಚಾಲನೆ

ಕಾಶಿ ವಿಶ್ವನಾಥ ದೇವಸ್ಥಾನದ ಇಡೀ ಅವರಣವನ್ನು ಜರ್ಮನ್ ಹ್ಯಾಂಗರ್ ಗಳಿಂದ ಹೊದಿಸಲಾಗುವುದು. ಮೇ ಮತ್ತು ಜೂನ್ ತಿಂಗಳುಗಳ ಕಡು ಬೇಸಿಗೆಯಲ್ಲಿ ಗುಡಿಗೆ ಭೇಟಿ ನೀಡಲಿರುವ ಭಕ್ತಾದಿಗಳಿಗೆ ಇದರಿಂದ ಭಾರೀ ನಿರಾಳತೆ ಒದಗಲಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ