2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ: ಎಜಿ ಪ್ರಭುಲಿಂಗ ನಾವದಗಿ
ಕರ್ನಾಟಕ ಸರ್ಕಾರದ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ ಎಂದು ಸರ್ಕಾರದ ಅಡ್ವೊಕೇಟ್ ಜನರಲ್ (ಎಜಿ) ಪ್ರಭುಲಿಂಗ ನಾವದಗಿಯವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು: ಕರ್ನಾಟಕ ಸರ್ಕಾರದ 2ಬಿ ಮೀಸಲಾತಿ (Muslim 2B Reservation) ರದ್ದು ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿಲ್ಲ ಎಂದು ಸರ್ಕಾರದ ಅಡ್ವೊಕೇಟ್ ಜನರಲ್ (ಎಜಿ) ಪ್ರಭುಲಿಂಗ ನಾವದಗಿಯವರು (AG Prabhuling Navadgi) ಸ್ಪಷ್ಟನೆ ನೀಡಿದ್ದಾರೆ. ಮುಂದಿನ ವಿಚಾರಣೆವರೆಗೆ ಹೊಸ ಮೀಸಲಾತಿಯಡಿ ನೇಮಕಾತಿ ಮಾಡುವುದಿಲ್ಲವೆಂದು ಈ ಹಿಂದೆ ಸರ್ಕಾರವೇ ಭರವಸೆ ನೀಡಿತ್ತು. ಈ ಭರವಸೆ ಮುಂದುವರೆಸುವುದಾಗಿ ಸರ್ಕಾರ ಹೇಳಿದ ಹಿನ್ನೆಲೆ ವಿಚಾರಣೆಯನ್ನು ಮೇ 9ಕ್ಕೆ ಸುಪ್ರೀಂ ಕೋರ್ಟ್ (Supreme Court) ಮುಂದೂಡಿದೆ ಎಂದು ಎಜಿ ಪ್ರಭುಲಿಂಗ ನಾವದಗಿಯವರು ಹೇಳಿದರು.
ಮುಸ್ಲಿಮರ 2ಬಿ ಮೀಸಲಾತಿ ರದ್ದಿಗೆ ಸುಪ್ರೀಂ ಕೋರ್ಟ್ ತಡೆ, ರಾಜ್ಯ ನಾಯಕರ ಪ್ರತಿಕ್ರಿಯೆ
ಮಸ್ಲಿಂ 2ಬಿ ಮೀಸಲಾತಿ ರದ್ದತಿಗೆ ಸುಪ್ರಿಂಕೋರ್ಟ್ ತಡೆಯಾಜ್ಞೆ ನೀಡಿದ ವಿಚಾರವಾಗಿ ರಾಜ್ಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾತನಾಡಿ ನ್ಯಾಯಾಲಯದ ತೀರ್ಪು ಬಿಜೆಪಿ ಕೆನ್ನೆಗೆ ಬಾರಿಸಿದಂತಿದೆ. ಇದು ನಿರೀಕ್ಷೆಯಂತೆ ಆಗಿದೆ ಇದು ಬಿಜೆಪಿಗೂ ಗೊತ್ತಿತ್ತು. ಸಮುದಾಯದ ಮಧ್ಯೆ ದ್ವೇಷ ಹರಡುವ ಉದ್ದೇಶದಿಂದ ಮಾಡಿದ್ದ ಆದೇಶವಾಗಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದರು.
ಇದನ್ನೂ ಓದಿ: ಮುಸ್ಲಿಮರ 2ಬಿ ಮೀಸಲಾತಿ ರದ್ದು; ಕರ್ನಾಟಕ ಸರ್ಕಾರದ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್
ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸರ್ಕಾರಕ್ಕೆ ನ್ಯಾಯಾಲಯ ತಕ್ಕ ಉತ್ತರ ನೀಡಿದೆ. ಬಿಜೆಪಿ ಜನರ ಬದುಕಿನ ನಡುವೆ ಆಟ ಆಡಿತ್ತು. ಮೀಸಲಾತಿಯಲ್ಲಿ ಜನರ ಜೀವನ, ಶಿಕ್ಷಣ ಮತ್ತು ಉದ್ಯೋಗ ಅಡಗಿದೆ. ಬಿಜೆಪಿ ಕೆಲಸ ಜನರಿಗೆ ಗೊತ್ತಾಗಿದೆ. ಇದಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ. ಮೀಸಲಾತಿ ಸೂಕ್ಷ್ಮ ವಿಚಾರ ಯಾರು ರಾಜಕೀಯ ಮಾಡಬಾರದು. ಮೀಸಲಾತಿ ಕೊಡುವಾಗ ತೆಗೆಯುವಾಗ ಅಧ್ಯಯನವಾಗಬೇಕು. ಆದರೆ ಮೀಸಲಾತಿಯನ್ನು ಓಟ್ಗಾಗಿ ಮಾಡುವುದು ನೀಚ ಕೆಲಸ ಎಂದು ಹೇಳಿದರು.
ಸುಪ್ರೀಂಕೋರ್ಟ್ ತಡೆ ನೀಡಿರುವುದನ್ನು ಸ್ವಾಗತಿಸುತ್ತೇನೆ
ಸುಪ್ರೀಂಕೋರ್ಟ್ ತಡೆ ನೀಡಿರುವುದನ್ನು ಸ್ವಾಗತಿಸುತ್ತೇನೆ. ಬಿಜೆಪಿ ಮೀಸಲಾತಿ ಪರವಾಗಿಲ್ಲ, ಮೀಸಲಾತಿಯ ವಿರೋಧಿಗಳು. ಮೀಸಲಾತಿಗೆ ಚಾರಿತ್ರಿಕ ಐತಿಹಾಸಿಕ ಹಿನ್ನೆಲೆ ಇದೆ ಎಂದು ಮೈಸೂರು ಜಿಲ್ಲೆ ಟಿ.ನರಸೀಪುರದಲ್ಲಿ ಹೆಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಸಂವಿಧಾನದಡಿ ಕೆಲಸ ಮಾಡಲು ಮನವಿ ಮಾಡ್ತೇವೆ
ಧರ್ಮದ ಆಧಾರದಲ್ಲಿ ಮೀಸಲಾತಿ ಕೊಡಲು ನಮ್ಮ ವಿರೋಧವಿದೆ. ಸುಪ್ರೀಂಕೋರ್ಟ್ಗೆ ನಾವು ಮೇಲ್ಮನವಿ ಸಲ್ಲಿಸುತ್ತೇವೆ. ಶೇ 4 ರಷ್ಟು ಮೀಸಲಾತಿ ತೆಗೆಯುವ ನಿರ್ಧಾರಕ್ಕೆ ಈಗಲೂ ಬದ್ಧರಿದ್ದೇವೆ. ವೋಟ್ ಬ್ಯಾಂಕ್ಗಾಗಿ ಈ ಮೀಸಲಾತಿ ನಿರ್ಣಯ ಮಾಡಿದ್ದರು. ಸುಪ್ರೀಂ ಕೋರ್ಟ್ ಸಂವಿಧಾನದಡಿ ಕೆಲಸ ಮಾಡಲು ಮನವಿ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ