IND vs WI: ಪಂದ್ಯದ ನಡುವೆ ಪ್ರಣಯದಾಟ… ಗರ್ಲ್ ​​ಫ್ರೆಂಡ್​ನಿಂದ ಬಿತ್ತು ಏಟು..!

Updated on: Oct 14, 2025 | 7:31 AM

India vs West Indies, 2nd Test: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 518 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ 248 ರನ್​ ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಫಾಲೋ ಆನ್ ಹೇರುವ ಮೂಲಕ ವಿಂಡೀಸ್ ಪಡೆಯನ್ನು ಮತ್ತೆ ಬ್ಯಾಟಿಂಗ್​ಗೆ ಆಹ್ವಾನಿಸಲಾಗಿದೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ 2ನೇ ಟೆಸ್ಟ್ ಪಂದ್ಯವು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಈ ಪಂದ್ಯದ 4ನೇ ದಿನದಾಟದಲ್ಲಿ ಆಟದೊಂದಿಗೆ ಪ್ರಣಯದಾಟ ಕೂಡ ಕಂಡು ಬಂದಿದೆ.

ಸೋಮವಾರ ನಡೆದ ದಿನದಾಟದ ವೇಳೆ ಪ್ರೇಮಿಗಳಿಬ್ಬರು ಸ್ಟೇಡಿಯಂ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತ ಕ್ಯಾಮೆರಮ್ಯಾನ್ ಕಣ್ಣು ಕೂಡ ಕ್ಯಾಮೆರವನ್ನು ಅತ್ತ ಕಡೆ ತಿರುಗಿಸಿದ್ದಾರೆ. ಇದೇ ವೇಳೆ ಪ್ರಿಯತಮೆ ತನ್ನ ಇನಿಯನಿ ಕೆನ್ನೆಗೆ ಪ್ರೀತಿಯಿಂದ ಹೊಡೆಯುತ್ತಿರುವುದು ಕಂಡು ಬಂದಿದೆ. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು,  ಕ್ರಿಕೆಟ್​ ಪ್ರೇಮಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್​ನಲ್ಲಿ 518 ರನ್​ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ 248 ರನ್​ ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಫಾಲೋ ಆನ್ ಹೇರುವ ಮೂಲಕ ವಿಂಡೀಸ್ ಪಡೆಯನ್ನು ಮತ್ತೆ ಬ್ಯಾಟಿಂಗ್​ಗೆ ಆಹ್ವಾನಿಸಲಾಗಿದೆ. ಅದರಂತೆ 270 ರನ್​ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆಡಿದ ವೆಸ್ಟ್ ಇಂಡೀಸ್ ತಂಡವು 390 ರನ್​ಗಳಿಸಿ ಆಲೌಟ್ ಆಯಿತು.

ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ 121 ರನ್​ಗಳ ಗುರಿ ಪಡೆದಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು 63 ರನ್​ ಕಲೆಹಾಕಿದ್ದು, ಕೊನೆಯ ದಿನದಾಟದಲ್ಲಿ 58 ರನ್​ಗಳಿಸಿದರೆ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಬಹುದು.

 

 

Published on: Oct 14, 2025 07:30 AM