ಕೊಪ್ಪಳದಲ್ಲಿ ಮತಾಂತರಗೊಂಡಿದ್ದ ಕುಟುಂಬ ಘರ್​ ವಾಪಸಿ; ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್‌

| Updated By: ವಿವೇಕ ಬಿರಾದಾರ

Updated on: Dec 14, 2022 | 10:46 PM

ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬ ಹಿಂದೂ ಧರ್ಮಕ್ಕೆ ವಾಪಸ್​ ಆಗಿದೆ.

ಕೊಪ್ಪಳ: ಕ್ರೈಸ್ತ (Christian) ಧರ್ಮಕ್ಕೆ ಮತಾಂತರವಾಗಿದ್ದ ಕುಟುಂಬ ಹಿಂದೂ (Hindu) ಧರ್ಮಕ್ಕೆ ವಾಪಸ್​ ಆಗಿದೆ. ಜಿಲ್ಲೆಯ ಕಾರಟಗಿ ಪಟ್ಟಣದ ರಾಮನಗರದಲ್ಲಿ ಕುಟುಂಬ ಹಲವು ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿತ್ತು. ಇಂದು (ಡಿ.14) ರಾಮನಗರದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮರುಳಸಿದ್ದೇಶ್ವರಶ್ರೀ, ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ವಾಪಸ್ ಕುಟುಂಬ ಘರ್ ವಾಪಸಿಯಾಗಿದೆ​.

ಬುಡ್ಗಜಂಗಮ ಸಮುದಾಯಕ್ಕೆ ಸೇರಿದ್ದ ಶಂಕರ್, ಪತ್ನಿ ಜಂಬಕ್ಕ ಕುಟುಂಬ ಹಲವು ವರ್ಷಗಳ ಹಿಂದೆ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಮತಾಂತರಗೊಂಡ ನಂತರ ಕುಟುಂಬ ದೌರ್ಜನ್ಯ ಅನುಭವಿಸಿತ್ತು. ಈ ಸಂಬಂಧ ಕುಟುಂಬ ಫಾಸ್ಟರ್ ವಿರುದ್ದ ಪ್ರಕರಣ ದಾಖಲಿಸಿದೆ.

Follow us on