Gift Politics: ಲಗ್ನ ಪತ್ರಿಕೆ ಹಂಚಿಕೆ ನೆಪದಲ್ಲಿ ಮತ ಬೇಟೆ, ಲಗ್ನಪತ್ರಿಕೆ ಕೊಡ್ರಿ ಸಾಕು.. ನಿಮ್ ಸೀರೆ ಯಾರಿಗೆ ಬೇಕು ಎಂದ ಜನ

Edited By: ಆಯೇಷಾ ಬಾನು

Updated on: Feb 15, 2023 | 2:44 PM

ಪಕ್ಷೇತರ ಅಭ್ಯರ್ಥಿ ಎಸ್ ಆರ್ ನವಲಿಹಿರೆಮಠ ಬೆಂಬಲಿಗರು ಸೀರೆ ಹಂಚಿಕೆ ಮಾಡುತ್ತಿದ್ದಾರೆ. ಇನ್ನು ಸೀರೆ ಹಂಚಲು ಬಂದವರಿಗೆ ಇಳಕಲ್ ನಗರ ಜೀರಪೇಠೆಯಲ್ಲಿ ಘೆರಾವ್ ಹಾಕಿ ತರಾಟೆಗೆ ತೆಗೆದುಕೊಳ್ಳಲಾಗಿದೆ.

ಬಾಗಲಕೋಟೆ: ಹುನಗುಂದ ಕ್ಷೇತ್ರದಲ್ಲಿ ಗಿಫ್ಟ್ ರಾಜಕಾರಣ ಜೋರಾಗಿ ನಡೆಯುತ್ತಿದೆ. ಮಗಳ ಮದುವೆ ನೆಪದಲ್ಲಿ ಮನೆ ಮನೆಗೆ ಸೀರೆ ಹಂಚಿಕೆ ಮಾಡಲಾಗುತ್ತಿದೆ. ಪಕ್ಷೇತರ ಅಭ್ಯರ್ಥಿ ಎಸ್ ಆರ್ ನವಲಿಹಿರೆಮಠ ಬೆಂಬಲಿಗರು ಸೀರೆ ಹಂಚಿಕೆ ಮಾಡುತ್ತಿದ್ದಾರೆ. ಇನ್ನು ಸೀರೆ ಹಂಚಲು ಬಂದವರಿಗೆ ಇಳಕಲ್ ನಗರ ಜೀರಪೇಠೆಯಲ್ಲಿ ಘೆರಾವ್ ಹಾಕಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಸೀರೆ ಯಾಕೆ ಹಂಚಲು ಬಂದಿರಿ ಇಲ್ಲಿಂದ ಹೋಗಿ. ಲಗ್ನಪತ್ರ ಮಾತ್ರ ಕೊಡಿ ಎಂದು ಆವಾಜ್ ಹಾಕಿದ್ದಾರೆ. ಚಿಕ್ಕಕೊಡಗಲಿ ಗ್ರಾಮದಲ್ಲೂ ಇದೇ ರೀತಿ ತರಾಟೆಗೆ ತೆಗೆದುಕೊಳ್ಳಲಾಗಿದೆ. ಸೀರೆ ಹಂಚಲು ಬಂದ ಮಹಿಳೆಯರಿಗೆ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ.

Published on: Feb 15, 2023 02:44 PM
Loading...
Unable to load recommendations.
Follow Us
TV9 Web

TV9 Kannada

Read More