‘ಗಿಲ್ಲಿ-ಕಾವ್ಯಾ ಮದುವೆ ನಡೆಯುತ್ತಾ’? ಉತ್ತರಿಸಿದ ತಾಯಿ
‘ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ವಿನ್ನರ್ ಆದರು. ಕಾವ್ಯಾ ಹಾಗೂ ಗಿಲ್ಲಿ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಇವರ ಮದುವೆ ಬಗ್ಗೆ ಈಗ ಉತ್ತರ ಸಿಕ್ಕಿದೆ. ಗಿಲ್ಲಿ ಹಾಗೂ ಕಾವ್ಯಾ ಅವರ ಮದುವೆ ನಡೆಯುತ್ತಾ ಎಂಬ ಪ್ರಶ್ನೆಗೆ ಕುಟುಂಬದವರು ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಗಿಲ್ಲಿ ಹಾಗೂ ಕಾವ್ಯಾ ಬಿಗ್ ಬಾಸ್ ಮನೆಯಲ್ಲಿ ಒಟ್ಟಿಗೆ ಇದ್ದರು. ಇವರ ಬಾಂಧವ್ಯ ಅಭಿಮಾನಿಗಳಿಗೆ ಇಷ್ಟ ಆಗಿದೆ. ಅವರ ಮದುವೆ ಮಾಡಿಸುತ್ತೇವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದಕ್ಕೆ ಗಿಲ್ಲಿ ತಾಯಿ ಉತ್ತರ ನೀಡಿದ್ದಾರೆ. ‘ಗಿಲ್ಲಿ ಯಾರನ್ನು ಮದುವೆ ಆಗಬೇಕು ಎಂದು ಇಷ್ಟಪಡುತ್ತಾನೋ ಅವರ ಜೊತೆ ಮದುವೆ ಮಾಡಿಸುತ್ತೇನೆ’ ಎಂದು ತಾಯಿ ಹೇಳಿದ್ದಾರೆ. ಅವರ ಹೇಳಿಕೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ. ಗಿಲ್ಲಿ ಹಾಗೂ ಕಾವ್ಯಾ ಬೆಸ್ಟ್ ಫ್ರೆಂಡ್ಸ್. ಈ ಗೆಳೆತನ ಮುಂದುವರಿಯಲಿ ಎಂಬುದು ಅಭಿಮಾನಿಗಳ ಕೋರಿಕೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
