‘ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ’; ಅಶ್ವಿನಿ ಎದುರು ಕಾಲ ಮೇಲೆ ಕಾಲಾಕಿ ಹೇಳಿದ ಗಿಲ್ಲಿ
ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಅಶ್ವಿನಿ ಗೌಡ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. ಅವರು ಅನೇಕ ಬಾರಿ ಟ್ರೋಲ್ ಕೂಡ ಆದರು. ಅವರು ಈಗ ಅಶ್ವಿನಿಗೆ ಕಾಲೆಳೆದಿದ್ದಾರೆ. ಆ ಸಂದರ್ಭದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿದೆ.
ಅಶ್ವಿನಿ ಹಾಗೂ ಅಭಿಷೇಕ್ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗಿದ್ದಾರೆ. ಇದಕ್ಕೆ ಟಾಸ್ಕ್ ಒಂದನ್ನು ನೀಡಲಾಯಿತು. ಮನಸ್ಸಿನಲ್ಲಿ ಸಮಯ ಎಣಿಸಿ 12 ನಿಮಿಷ ಆದ ಬಳಿಕ ಬೆಲ್ ಬಾರಿಸಬೇಕು. ಈ ವೇಳೆ ಅವರ ಲೆಕ್ಕಾಚಾರ ತಪ್ಪಿಸಲು ಮನೆಯ ಸ್ಪರ್ಧಿಗಳು ಅಡ್ಡಿ ಉಂಟು ಮಾಡಬಹುದು. ಈ ವೇಳೆ ಗಿಲ್ಲಿ ಅವರು ಅಶ್ವಿನಿಯ ಕಾಲಳೆದಿದ್ದಾರೆ. ‘ನಿನ್ನಂಥವರನ್ನು ಎಷ್ಟು ಜನರನ್ನು ನೋಡಿಲ್ಲ’ ಎಂದು ಅಶ್ವಿನಿ ಹೇಳಿದರು. ಇದಕ್ಕೆ ಉತ್ತರಿಸಿದ ಗಿಲ್ಲಿ, ‘ನನ್ನಂಥವರ ನೋಡಿರಬಹುದು, ಆದರೆ ನನ್ನ ನೋಡಿಲ್ಲ’; ಅಶ್ವಿನಿ ಎದುರು ಕಾಲ ಮೇಲೆ ಕಾಲಾಕಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
