ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಗಿಲ್ಲಿ ನಟ ಅವರು ಯಾವಾಗಲೂ ಮನರಂಜನೆ ನೀಡುವ ಕೆಲಸ ಮಾಡುತ್ತಾರೆ. ಈಗ ಅವರು ಉಪ್ಪಿ ಸ್ಟೈಲ್ ಅಲ್ಲಿ ಡೈಲಾಗ್ ಹೇಳಿದ್ದಾರೆ. ಈ ಸಂದರ್ಭದ ವಿಡಿಯೋ ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಾ ಇದೆ. ಈ ವಿಡಿಯೋನ ಫ್ಯಾನ್ಸ್ ಸಾಕಷ್ಟು ಇಷ್ಟಪಟ್ಟಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಉಪೇಂದ್ರ ನಟನೆಯ ‘ಎ’ ಸಿನಿಮಾದಲ್ಲಿ ಸಾಕಷ್ಟು ಐಕಾನಿಕ್ ದೃಶ್ಯಗಳನ್ನು ನೀವು ಕಾಣಬಹುದು. ಅದರಲ್ಲಿ ‘ಈ ಕೆಟ್ಟ ಪ್ರಪಂಚದಲ್ಲಿ ಒಂದು ಸ್ವರ್ಗ ತೋರಿಸುತ್ತೇನೆ ಎಂದು ಹೇಳುವ ಡೈಲಾಗ್ ಕೂಡ ಇದೆ. ಇದನ್ನು ಗಿಲ್ಲಿ ನಟ ಅನುಕರಿಸಿದ್ದಾರೆ. ಧ್ರುವಂತ್ ಅವರ ಆಟದಲ್ಲಿ ಬದಲಾವಣೆಗಳನ್ನು ಗಮನಿಸಿ ಅವರು ಈ ಡೈಲಾಗ್ ಹೇಳಿದ್ದಾರೆ. ಇದನ್ನು ಕೇಳಿ ಪಕ್ಕದಲ್ಲೇ ಇದ್ದ ರಜತ್ ಹಾಗೂ ರಘು ಅವರು ನಕ್ಕರು. ಪ್ರಸ್ತುತ ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆಯುತ್ತಿದೆ. ವಿಡಿಯೋ ಮೇಲಿದೆ, ವೀಕ್ಷಿಸಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.