ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ ಶೆಟ್ಟಿ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿ ನಟ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸುವುದಾಗಿ ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಅವರಿಗೆ ಕಾವ್ಯ ಶೈವ ತಿರುಗೇಟು ನೀಡಿದ್ದಾರೆ. ‘ಕಾನ್ಫಿಡೆನ್ಸ್ ಇರಬೇಕು. ಆದರೆ ಅವಳಿಗೆ ಓವರ್ ಕಾನ್ಫಿಡೆನ್ಸ್ ಇದೆ’ ಎಂದು ಕಿಚ್ಚ ಸುದೀಪ್ ಎದುರಲ್ಲೇ ಕಾವ್ಯ ಶೈವ ಅವರು ಹೇಳಿದ್ದಾರೆ.
ಈ ಬಾರಿ ಬಿಗ್ ಬಾಸ್ ಗೆಲ್ಲೋದು ಯಾರು ಎಂಬ ಚರ್ಚೆ ಜೋರಾಗಿದೆ. ಗಿಲ್ಲಿ ನಟ (Gilli Nata) ಅವರೇ ಈ ಬಾರಿ ವಿನ್ ಆಗುತ್ತಾರೆ ಎಂಬುದು ಬಹುತೇಕರ ಅಭಿಪ್ರಾಯ. ಕಾಮಿಡಿ ಮೂಲಕ ಅವರು ಎಲ್ಲರನ್ನೂ ರಂಜಿಸುತ್ತಿದ್ದಾರೆ. ವೀಕ್ಷಕರಿಗೆ ಅವರ ಕಾಮಿಡಿ ಇಷ್ಟ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಹತ್ತಿರ ಆಗುತ್ತಿರುವಾಗ ಪೈಪೋಟಿ ಹೆಚ್ಚಿದೆ. ಗಿಲ್ಲಿ ನಟ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕಳಿಸುವುದಾಗಿ ರಕ್ಷಿತಾ ಶೆಟ್ಟಿ (Rakshitha Shetty) ಹೇಳಿದ್ದಾರೆ. ಅವರಿಗೆ ಕಾವ್ಯ ಶೈವ ಮಾತಿನ ಪಂಚ್ ನೀಡಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ಅವಳು ಇಲ್ಲದೇ ಸ್ಪಾರ್ಕ್ ಇರಲ್ಲ ಎಂಬ ಭ್ರಮೆಯಲ್ಲಿ ಇದ್ದಾಳೆ. ಕಾನ್ಫಿಡೆನ್ಸ್ ಇರಬೇಕು. ಆದರೆ ಅವಳಿಗೆ ಓವರ್ ಕಾನ್ಫಿಡೆನ್ಸ್ ಇದೆ’ ಎಂದು ಕಿಚ್ಚ ಸುದೀಪ್ ಎದುರಲ್ಲೇ ಕಾವ್ಯ (Kavya Shaiva) ಅವರು ಹೇಳಿದ್ದಾರೆ. ಭಾನುವಾರದ (ಡಿ.21) ಸಂಚಿಕೆಯ ಪ್ರೋಮೋ ಇಲ್ಲಿದೆ ನೋಡಿ..
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
