ಕುಸಿದ ಫ್ಲೈಓವರ್, ದಿಕ್ಕಾಪಾಲಾಗಿ ಓಡಿದ ರಸ್ತೆಯಲ್ಲಿದ್ದ ಜನ: ವಿಡಿಯೋ ನೋಡಿ

|

Updated on: Oct 19, 2023 | 5:59 PM

ಅವ್ಯವಸ್ಥೆ, ಅನಾಹುತದ ಮಧ್ಯೆ, ಮೇಲ್ಸೇತುವೆ ನಿರ್ಮಾಣದಲ್ಲಿ ಸಂಭಾವ್ಯ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಳವಳಗಳು ವ್ಯಕ್ತವಾಗಿವೆ. ಅನೇಕರು ಮೇಲ್ಸೇತುವೆ ಕುಸಿತಕ್ಕೆ ಭ್ರಷ್ಟಾಚಾರವನ್ನು ದೂಷಿಸಿದ್ದಾರೆ. ಭ್ರಷ್ಟಾಚಾರವು ಗರಿಷ್ಠ ಮಟ್ಟದಲ್ಲಿದೆ ಎಂದಿದ್ದಾರೆ. ಸಚಿವರೊಬ್ಬರು ಸೇತುವೆಯನ್ನು ಉದ್ಘಾಟಿಸುತ್ತಿರುವಾಗಲೇ ಈ ಘಟನೆ ನಡೆದಿದ್ದರೆ... ಎಂದು ಮತ್ತೊಬ್ಬ ನೆಟಿಜನ್ ಬಯಸಿದ್ದಾರೆ

ಮುಂಬೈ-ಗೋವಾ ಹೆದ್ದಾರಿಯ ( Mumbai-Goa highway) ಮಹಾರಾಷ್ಟ್ರದ ಚಿಪ್ಲುನ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆ (under construction flyover) ಕುಸಿದಿದೆ. ಮೇಲ್ಸೇತುವೆ ಕಟ್ಟಡದ ಗರ್ಡರ್ (girder) ಸೋಮವಾರ ಕುಸಿದಿದ್ದು (collapsed) ಭಾರಿ ಹಾನಿಯಾಗಿದೆ. ನಿರ್ಮಾಣ ಹಂತದಲ್ಲಿದ್ದ ಹೆದ್ದಾರಿ ಕುಸಿತದ ಈ ಭಯಾನಕ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ (CCTV camera) ಸೆರೆಯಾಗಿವೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸುದ್ದಿ ಸಂಸ್ಥೆ ANI ದೃಢಪಡಿಸಿದೆ. ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಚಿಪ್ಲುನ್ ನಗರದಲ್ಲಿ ಈ ಘಟನೆ ನಡೆದಿದೆ. ಪಿಲ್ಲರ್ ಕುಸಿದು, ಫ್ಲೈಓವರ್‌ನ ಒಂದು ಭಾಗ ಕುಸಿದಿದೆ. ಇದರ ಪರಿಣಾಮವಾಗಿ ಸೈಟ್‌ನಲ್ಲಿದ್ದ ಕ್ರೇನ್‌ಗೆ ಹಾನಿಯಾಗಿದೆ.

ಅಧಿಕೃತ ವಕ್ತಾರರ ಪ್ರಕಾರ, ಮುಂಜಾನೆ ಸೇತುವೆಯ ಎತ್ತರದ ಸ್ಥಾನದಲ್ಲಿ ಗರ್ಡರ್​ ಇರಿಸುವ ಪ್ರಕ್ರಿಯೆಯಲ್ಲಿ ಬಿರುಕು ಬಿಟ್ಟುಕೊಂಡು ಈ ಅನಾಹುತ ಸಂಭವಿಸಿದೆ. ಬಹಳಷ್ಟು ಕಾಲ ಗರ್ಡರ್​​ ತೂಗುಯ್ಯಾಲೆಯಾಡುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ, ಸುತ್ತಮುತ್ತಲಿನ ಪ್ರದೇಶದಲ್ಲಿ ತಕ್ಷಣವೇ ಸಂಚಾರ ಸ್ಥಗತಿಗೊಳಿಸಲಾಯಿತು. ಸರಿಸುಮಾರು ಮಧ್ಯಾಹ್ನದ ವೇಳೆಗೆ ಗರ್ಡರ್ ಅಂತಿಮವಾಗಿ ಪೂರ್ಣವಾಗಿ ಕುಸಿಯಿತು. ಸುಮಾರು 30 ಮೀಟರ್ ಕೆಳಕ್ಕೆ ಕುಸಿದಿದೆ.

ಅವ್ಯವಸ್ಥೆ, ಅನಾಹುತದ ಮಧ್ಯೆ, ಮೇಲ್ಸೇತುವೆ ನಿರ್ಮಾಣದಲ್ಲಿ ಸಂಭಾವ್ಯ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಕಳವಳಗಳು ವ್ಯಕ್ತವಾಗಿವೆ. ಅನೇಕರು ಮೇಲ್ಸೇತುವೆ ಕುಸಿತಕ್ಕೆ ಭ್ರಷ್ಟಾಚಾರವನ್ನು ದೂಷಿಸಿದ್ದಾರೆ. ಭ್ರಷ್ಟಾಚಾರವು ಗರಿಷ್ಠ ಮಟ್ಟದಲ್ಲಿದೆ ಎಂದಿದ್ದಾರೆ. ಸಚಿವರೊಬ್ಬರು ಸೇತುವೆಯನ್ನು ಉದ್ಘಾಟಿಸುತ್ತಿರುವಾಗಲೇ ಈ ಘಟನೆ ನಡೆದಿದ್ದರೆ… ಎಂದು ಮತ್ತೊಬ್ಬ ನೆಟಿಜನ್ ಬಯಸಿದ್ದು, ನಿರ್ಮಾಣ ಯೋಜನೆ ನಿರ್ವಹಣೆಯಲ್ಲಿ ಅಸಡ್ಡೆ ಎದ್ದುಕಾಡುತ್ತಿದೆ ಎಂದಿದ್ದಾರೆ.

Published On - 5:51 pm, Thu, 19 October 23

Follow us on