ಅಧ್ಯಕ್ಷರಲ್ಲದಾಗಲೂ ಕುಮಾರಸ್ವಾಮಿಯವರೇ ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದರು: ಎನ್ ಚಲುವರಾಯಸ್ವಾಮಿ
ಇಬ್ರಾಹಿಂ ಒಬ್ಬರೇ ಅಂತಲ್ಲ, ಬೇರೆ ಯಾರೇ ಪಕ್ಷದ ಅಧ್ಯಷರಾಗಿದ್ದರೂ ಅಧ್ಯಾಕ್ಷಗಿರಿಯನ್ನು ಕುಮಾರಸ್ವಾಮಿ ನಡೆಸುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಮಾತ್ರ ಅಧ್ಯಕ್ಷರಾಗಿರುವರು ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ ಎಂದ ಸಚಿವರು, ಮಾಧ್ಯಮದವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ನಗುತ್ತಾ ಹೇಳಿದರು.
ಬೆಂಗಳೂರು: ಹಿಂದೊಮ್ಮೆ ಜೆಡಿಎಸ್ ಪಕ್ಷದ ಪ್ರಭಾವಿ ನಾಯಕರೆನಿಸಿಕೊಂಡಿದ್ದ ಈಗಿನ ಕೃಷಿ ಸಚಿವ ಎನ್ ಚಲುವರಾಯಸ್ವಾಮಿಗೆ (N Cheluvarayaswamy) ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಬಗ್ಗೆ ಗೇಲಿ ಮಾಡಿ ಮಾತಾಡುವುದೆಂದರೆ ಮುದ್ದೆ ಸವಿದಷ್ಟೇ ಖುಷಿ ಮಾರಾಯ್ರೇ. ಇವತ್ತು ಜೆಡಿಎಸ್ ಪಕ್ಷದಲ್ಲಿ ನಡೆದ ಬೆಳವಣಿಗೆ ನಿಮಗೆ ಗೊತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್ ಡಿ ದೇವೇಗೌಡ (HD Devegowda) ಅವರು ಪಕ್ಷದ ನಾಯಕತ್ವಕ್ಕೆ ಸವಾಲೆಸೆದಿದ್ದ ಸಿಎಂ ಇಬ್ರಾಹಿಂ (CM Ibrahim) ಅವರನ್ನು ಉಚ್ಚಾಟಿಸಿ ಅವರ ಸ್ಥಾನದಲ್ಲಿ ಕುಮಾರಸ್ವಾಮಿಯನ್ನು ನೇಮಕ ಮಾಡಿದ್ದಾರೆ. ಇದೇ ಸಂಗತಿಯನ್ನು ನಗರದಲ್ಲಿಂದು ಪತ್ರಕರ್ತರು ಚಲುವರಾಯಸ್ವಾಮಿಗೆ ಹೇಳಿದಾಗ ಅವರು ನಗಲಾರಂಭಿಸಿದರು. ಅಧ್ಯಕ್ಷರಲ್ಲದ ಸಮಯದಲ್ಲೂ ಕುಮಾರಸ್ವಾಮಿಯವರೇ ಪಕ್ಷದ ಅಧ್ಯಕ್ಷರಾಗಿದ್ದರು, ಇಬ್ರಾಹಿಂ ಒಬ್ಬರೇ ಅಂತಲ್ಲ, ಬೇರೆ ಯಾರೇ ಪಕ್ಷದ ಅಧ್ಯಷರಾಗಿದ್ದರೂ ಅಧ್ಯಾಕ್ಷಗಿರಿಯನ್ನು ಕುಮಾರಸ್ವಾಮಿ ನಡೆಸುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ಮಾತ್ರ ಅಧ್ಯಕ್ಷರಾಗಿರುವರು ಅಧ್ಯಕ್ಷರಾಗಿ ಕೆಲಸ ಮಾಡುತ್ತಾರೆ ಎಂದು ಚಲುವರಾಯಸ್ವಾಮಿ ಹೇಳಿದರು. ಮುಂದುವರಿದು ಮಾತಾಡಿದ ಸಚಿವರು, ಮಾಧ್ಯಮದವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ ಎಂದು ನಗುತ್ತಾ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ