AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Udupi News: ಸಸ್ಪೆಂಡ್ ಆಗಿರುವ ವಿದ್ಯಾರ್ಥಿನಿಯರು ತಮ್ಮ ಸಮುದಾಯದ ಯುವಕರೊಂದಿಗೆ ಫೋನ್ ಗಳನ್ನು ಎಕ್ಸ್​ಚೇಂಜ್ ಮಾಡುತ್ತಿದ್ದರೇ?

Udupi News: ಸಸ್ಪೆಂಡ್ ಆಗಿರುವ ವಿದ್ಯಾರ್ಥಿನಿಯರು ತಮ್ಮ ಸಮುದಾಯದ ಯುವಕರೊಂದಿಗೆ ಫೋನ್ ಗಳನ್ನು ಎಕ್ಸ್​ಚೇಂಜ್ ಮಾಡುತ್ತಿದ್ದರೇ?

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ| Edited By: |

Updated on:Jul 27, 2023 | 3:05 PM

Share

ಕಾಲೇಜು ವ್ಯವಸ್ಥಾಪಕ ಮಂಡಳಿ ಆ ಮೂರು ವಿದ್ಯಾರ್ಥಿನಿಯರನ್ನು ರೆಸ್ಟಿಕೇಟ್ ಮಾಡಿಲ್ಲ ಕೇವಲ ಸಸ್ಪೆಂಡ್ ಮಾತ್ರ ಮಾಡಿದ್ದಾರೆ ಎಂದು ಟಿವಿ9 ಕನ್ನಡ ವಾಹಿನಿಯೊಂದಿಗೆ ಮಾತಾಡಿದ ಅದೇ ಕಾಲೇಜಿನ ವಿದ್ಯಾರ್ಥಿನಿಯರು ಹೇಳುತ್ತಾರೆ.

ಉಡುಪಿ: ಇಲ್ಲಿನ ಕಾಲೇಜೊಂದರಲ್ಲಿ ನಡೆದಿರುವ ವಿಡಿಯೋ ರೆಕಾರ್ಡಿಂಗ್ ಘಟನೆಯ ಬಗ್ಗೆ ಅದೇ ಕಾಲೇಜಿನ ವಿದ್ಯಾರ್ಥಿನಿಯರು ಕೆಲ ಗಂಭೀರ ಆರೋಪಗಳನ್ನು (serious allegation) ಮಾಡುತ್ತಿದ್ದಾರೆ. ಈಗ ಸಸ್ಪೆಂಡ್ ಅಗಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿನಿಯರು (suspended girl students) ತಮ್ಮ ಮೊಬೈಲ್ ಗಳನ್ನು ಲಂಚ್ ವಿರಾಮದ ವೇಳೆ ಕಾಲೇಜು ಬಳಿ ಬರುತ್ತಿದ್ದ ಅವರ ಸಮುದಾಯ (community) ಯುವಕರೊಂದಿಗೆ ಬದಲಾಯಿಸಿಕೊಳ್ಳುತ್ತಿದ್ದರು ಮತ್ತು ಆ ದೃಶ್ಯಗಳು ಕಾಲೇಜು ಅವರಣದಲ್ಲಿರುವ ಸಿಸಿಟವಿಗಳಲ್ಲಿ ಸೆರೆಯಾಗಿವೆ ಎಂದು ವಿದ್ಯಾರ್ಥಿನಿಯರು ಹೇಳುತ್ತಾರೆ. ಕಾಲೇಜಿನ ವ್ಯವಸ್ಥಾಪಕ ಮಂಡಳಿ ಆ ಮೂರು ವಿದ್ಯಾರ್ಥಿನಿಯರನ್ನು ರೆಸ್ಟಿಕೇಟ್ ಮಾಡಿಲ್ಲ ಕೇವಲ ಸಸ್ಪೆಂಡ್ ಮಾತ್ರ ಮಾಡಿದ್ದಾರೆ ಮತ್ತು ಅವರಲ್ಲಿದ್ದ ಮೊಬೈಲ್ ಫೋನ್ ಗಳನ್ನು ಮುಟ್ಟಗೋಲು ಹಾಕಿಕೊಳ್ಳದೆ ಹಿಂತಿರುಗಿಸಲಾಗಿದೆ ಎಂದು ವಿದ್ಯಾರ್ಥಿನಿಯರು ಹೇಳುತ್ತಾರೆ. ಗಾಬರಿ ಹುಟ್ಟಿಸುವ ಸಂಗತಿಯೆಂದರೆ ಇದೆಲ್ಲ ಒಂದು ವರ್ಷದಿಂದ ನಡೆದುಕೊಂಡು ಬರುತ್ತಿದೆ ಎಂದು ವಿದ್ಯಾರ್ಥಿನಿಯರು ಹೇಳುತ್ತಾರೆ. ಹಾಗಾದರೆ, ವಿಷಯವನ್ನು ಆಗಲೇ ಯಾಕೆ ಬಯಲು ಮಾಡಲಿಲ್ಲ ಅನ್ನೋ ಪ್ರಶ್ನೆ ಉದ್ಭವಿಸುತ್ತದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

Published on: Jul 27, 2023 02:58 PM

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.