ಚಿನ್ನದ ಅಂಗಡಿ ಕದಿಯಲು ಬಂದ ಗ್ಯಾಂಗನ್ನೇ ಓಡಿಸಿದ ಮಹಿಳೆ!
ಚಿನ್ನದ ಅಂಗಡಿ ಕದಿಯಲು ಬಂದ ಕಳ್ಳರು ಮಹಿಳೆ ಕಿರುಚಿದ್ದು ಕೇಳಿ ಓಡಿ ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ. ಕಳ್ಳರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಶೆಟರ್ ಮುರಿದು ಅಂಗಡಿಗೆ ನುಗ್ಗಿ ಕಳ್ಳತನಕ್ಕೆ ಯತ್ನ ನಡೆಸಿರುವ ದೃಶ್ಯ ಸೆರೆಯಾಗಿದೆ.
ಚಿಕ್ಕೋಡಿ, ಸೆಪ್ಟೆಂಬರ್ 25: ಚಿನ್ನದ ಅಂಗಡಿ (Gold Shop) ಕದಿಯಲೆಂದು ಬಂದ ಕಳ್ಳರನ್ನ ಮಹಿಳೆಯೋರ್ವರು ಕಿರುಚಿ ಓಡಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಬೆಂಡವಾಡ ಗ್ರಾಮದಲ್ಲಿ ನಡೆದಿದೆ. ಚಿನ್ನದ ಅಂಗಡಿಯ ಶೆಟರ್ ಮುರಿದ ಮೂವರು ಕಳ್ಳತನಕ್ಕೆ ಯತ್ನ ನಡೆಸಿದ್ದಾರೆ. ಈ ವೇಳೆ ಇದನ್ನು ನೋಡಿದ ಮಹಿಳೆ ಕಿರುಚಿದ್ದು, ಬೈಕ್ ಏರಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಅಂಗಡಿಗೆ ಎಂಟ್ರಿಯಾಗುತ್ತಲೇ ಖದೀಮರು ಸಿಸಿಟಿವಿಯನ್ನೂ ನಾಶ ಮಾಡಿದ್ದು, ಅವರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಯಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Published on: Sep 25, 2025 12:05 PM
