ಮನೆ ಮಂದಿ ಮೇಲೆ ಬೆಂಕಿ ಉಂಡೆ ಉಗುಳಿದ ಗೋಲ್ಡ್ ಸುರೇಶ್, ಸಿಟ್ಟಿಗೆ ಕಾರಣವೇನು?

Updated on: Nov 12, 2024 | 2:26 PM

Bigg Boss Kannada season 11: ಸಾಮಾನ್ಯವಾಗಿ ಮನೆಯಲ್ಲಿ ತುಸು ತಾಳ್ಮೆಯಿಂದಿರುವ ಸುರೇಶ್​ ಈಗ ಏಕಾಏಕಿ ಸಿಟ್ಟಿಗೆದ್ದಿದ್ದಾರೆ. ಚೈತ್ರಾ ಕುಂದಾಪುರಗಂತೂ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುರೇಶ್ ಸಿಟ್ಟಿಗೆ ಕಾರಣವೇನು?

ಬಿಗ್​ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ತುಸು ಕಡಿಮೆ ಆಕ್ರಮಣಕಾರಿ. ಸಾಧ್ಯವಾದಷ್ಟು ಸೌಮ್ಯವಾಗಿಯೇ ಇರುತ್ತಾರೆ. ಆದರೆ ಇದನ್ನೇ ಕೆಲವು ಮನೆಯವರು ಅವರ ವಿರುದ್ಧ ಬಳಸುತ್ತಾರೆ. ಹೇಗೋ ಪ್ರಶ್ನೆ ಮಾಡುವುದಿಲ್ಲ, ಜಗಳ ಆಡುವುದಿಲ್ಲ ಎಂದು ನಾಮಿನೇಶನ್ ಇನ್ನಿತರೆಗಳು ಬಂದಾಗ ಸಾಮೂಹಿಕವಾಗಿ ಸುರೇಶ್ ಹೆಸರು ಹೇಳಿಬಿಡುತ್ತಾರೆ. ಆದರೆ ಸಾಮಾನ್ಯವಾಗಿ ತಾಳ್ಮೆಯಿಂದಲೇ ಇರುವ ಸುರೇಶ್ ಇದೀಗ ಸಿಟ್ಟು ನೆತ್ತಿಗೇರಿಸಿಕೊಂಡಿದ್ದಾರೆ. ಮನೆ ಮಂದಿ ವಿರುದ್ಧ ಬೆಂಕಿ ಉಗುಳಿದ್ದಾರೆ. ಚೈತ್ರಾ ಕುಂದಾಪುರಗಂತೂ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 12, 2024 02:17 PM
Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More