ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ

|

Updated on: Jan 04, 2025 | 8:35 PM

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರಿಂದ ಕೌಟುಂಬಿಕ ಕಾರಣಗಳಿಂದಾಗಿ ಹೊರಗೆ ಹೋದ ಗೋಲ್ಡ್ ಸುರೇಶ್ ಅವರು, ಮನೆಯಲ್ಲಿದ್ದಾಗ, ಧನರಾಜ್​ಗೆ ಪ್ರಾಮಿಸ್ ಮಾಡಿದ್ದರಂತೆ. ಅವರ ಮಗಳಿಗೆ ತೊಟ್ಟಿಲು ಉಡುಗೊರೆ ಕೊಡುವುದಾಗಿ. ಇದೀಗ ಮನೆಯಿಂದ ಹೊರಗೆ ಬಂದ ಮೇಲೆ ಧನರಾಜ್ ಮನೆಗೆ ಭೇಟಿ ನೀಡಿರುವ ಸುರೇಶ್ ತೊಟ್ಟಿಲು ಉಡುಗೊರೆ ನೀಡಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಯಶಸ್ವಿಯಾಗಿ ಚಾಲ್ತಿಯಲ್ಲಿದೆ. ಕೆಲವರು ಅಚ್ಚರಿಯ ಪ್ರದರ್ಶನ ಹೆಚ್ಚು ವಾರಗಳ ಕಾಲ ಉಳಿದುಕೊಂಡಿದ್ದಾರೆ. ಅವರಲ್ಲಿ ಧನರಾಜ್ ಸಹ ಒಬ್ಬರು. ಧನರಾಜ್, ಬಿಗ್​ಬಾಸ್​ಗೆ ಬಂದ ಆರಂಭದಲ್ಲಿ ಇವರು ಬೇಗನೆ ಎಲಿಮಿನೇಟ್ ಆಗುತ್ತಾರೆ ಎಂದು ಬಹಳ ಮಂದಿ ಅಂದುಕೊಂಡಿದ್ದರು, ಆದರೆ ಎಲ್ಲರೊಡನೆ ಸ್ನೇಹ ಉಳಿಸಿಕೊಂಡು ಧನರಾಜ್ ಹಲವು ವಾರಗಳ ಕಾಲ ಉಳಿದುಕೊಂಡು ಬಂದಿದ್ದಾರೆ. ಬಿಗ್​ಬಾಸ್ ಮನೆಯಿಂದ ಅನಿವಾರ್ಯ ಕಾರಣದಿಂದ ಹೊರಗೆ ಹೋದ ಸುರೇಶ್ ಅವರೊಟ್ಟಿಗೆ ಧನರಾಜ್​ಗೆ ಒಳ್ಳೆಯ ಗೆಳೆತನ ಇತ್ತು. ಮನೆಯಲ್ಲಿದ್ದಾಗ, ಧನರಾಜ್ ಮಗಳಿಗೆ ತೊಟ್ಟಿಲು ಉಡುಗೊರೆ ಕೊಡುವುದಾಗಿ ಸುರೇಶ್ ಹೇಳಿದ್ದರು. ಇದೀಗ ಬಿಗ್​ಬಾಸ್ ಮನೆಯಿಂದ ಹೊರಗೆ ಹೋಗಿರುವ ಸುರೇಶ್, ಧನರಾಜ್ ಮನೆಗೆ ಭೇಟಿ ನೀಡಿ ಮಗಳಿಗೆ ಉಡುಗೊರೆ ಕೊಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jan 04, 2025 08:34 PM