ನೀರಜ್ ಚೋಪ್ರಾ ಜಾವೆಲಿನ್ ಅನ್ನು ದೂರಕ್ಕೆ ಎಸೆದ ಹಾಗೆ ಖ್ಯಾತ ಮಾಡೆಲ್​​​ಗಳನ್ನೂ ದೂರ ತಳ್ಳಿ ಅವರ ಸ್ಥಾನ ಆಕ್ರಮಿಸಿಕೊಂಡಿದ್ದಾರೆ!

| Updated By: shruti hegde

Updated on: Nov 11, 2021 | 9:24 AM

ಪತ್ರಿಕೆಯ ಮುಖಪುಟದ ಮೇಲೆ ನೀರಜ್ ಅವರು ಶ್ವೇತ ವರ್ಣದ ನಿಟ್ಟೆಡ್ ಸ್ವೆಟರ್ನಲ್ಲಿ ಕಂಗೊಳಿಸುತ್ತಿದ್ದಾರೆ. ಅದಕ್ಕೆ ಅವರು ತೊಟ್ಟಿರುವ ಕಪ್ಪು ವರ್ಣದ ಟ್ರೌಸರ್ ಬಹಳ ಒಪ್ಪವಾಗಿ ಕಾಣುತ್ತದೆ.

ಭಾರತದಲ್ಲಿ ಈಗ ಅತಿ ಜನಪ್ರಿಯ ವ್ಯಕ್ತಿ ಯಾರಿರಬಬಹುದೆಂದು ಊಹಿಸಬಲ್ಲಿರಾ? ಅದು ಬಾಲಿವುಡ್ ನಟನೂ ಅಲ್ಲ ಮತ್ತು ಕ್ರಿಕೆಟ್ ಆಟಗಾರ ಸಹ ಅಲ್ಲ. ಅವರನ್ನ ಬಿಟ್ಟರೆ ಬೇರೆ ಯಾರಿರಲು ಸಾಧ್ಯ ಅಂತ ನಿಮ್ಮ ಗೊಂದಲವಾಗಿರಬಹುದು. ಈಗ ಪ್ರಶ್ನೆಯಲ್ಲಿರುವ ವ್ಯಕ್ತಿ ಮೊದಲ ಬಾರಿಗೆ ಜಾಹೀರಾತೊಂದಲ್ಲಿ ಕಾಣಿಸಿಕೊಂಡಾಗಲೇ ಅವರ ನಟನಾ ಕೌಶಲ್ಯ ಕಂಡು ಬಾಲಿವುಡ್ ನಟರೆಲ್ಲ ನಿಬ್ಬೆರಗಾಗಿದ್ದರು. ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದು ಕೊಟ್ಟ ನಂತರ ನೀರಜ್ ಚೋಪ್ರಾ ಅವರ ಬದುಕೇ ಬದಲಾಗಿಬಿಟ್ಟಿದೆ ಮಾರಾಯ್ರೇ. ಜನಪ್ರಿಯ ಮ್ಯಾಗಜಿನ್ ವೋಗ್ ನೀರಜ್ ಅವರನ್ನು ವರ್ಷದ ವ್ಯಕ್ತಿಯೆಂದು ಘೋಷಿಸಿ ನವೆಂಬರ್ ತಿಂಗಳ ಸಂಚಿಕೆಗೆ ಅವರ ಫೋಟೋಶಾಟ್ ಮಾಡಿ ಪ್ರಕಟಿಸಿದೆ. ಶೂಟ್ ನಲ್ಲಿ ಅವರು ತೊಟ್ಟಿರುವ ಚಳಿಗಾಲದ ಉಡುಗೆಗಳನ್ನು ಖ್ಯಾತ ಫ್ಯಾಶನ್ ಡಿಸೈನರ್ ಪ್ರಿಯಾಂಕಾ ಕಪಾಡಿಯಾ ವಿನ್ಯಾಸಗೊಳಿಸಿದ್ದಾರೆ. ಎಲ್ಲ ವಸ್ತ್ರಗಳಲ್ಲೂ 23-ವರ್ಷ ವಯಸ್ಸಿನ ನೀರಜ್ ಸ್ಟೈಲಿಶ್ ಮತ್ತು ತುಂಬಾ ಆಕರ್ಷಕವಾಗಿ ಕಾಣುತ್ತಿದ್ದಾರೆ.

ಪತ್ರಿಕೆಯ ಮುಖಪುಟದ ಮೇಲೆ ನೀರಜ್ ಅವರು ಶ್ವೇತ ವರ್ಣದ ನಿಟ್ಟೆಡ್ ಸ್ವೆಟರ್ನಲ್ಲಿ ಕಂಗೊಳಿಸುತ್ತಿದ್ದಾರೆ. ಅದಕ್ಕೆ ಅವರು ತೊಟ್ಟಿರುವ ಕಪ್ಪು ವರ್ಣದ ಟ್ರೌಸರ್ ಬಹಳ ಒಪ್ಪವಾಗಿ ಕಾಣುತ್ತದೆ. ಚಳಿಗಾಲಕ್ಕೆ ಸ್ವೆಟರ್ ಖರೀದಿಸುವ ಇರಾದೆ ನಿಮ್ಮಲ್ಲಿದ್ದರೆ, ನೀರಜ್ ತೊಟ್ಟಿರುವ ಸ್ವೆಟರ್ ನಿಮಗೆ ಪ್ರೇರಣೆಯಾಗಬಹುದು. ಟೋಕಿಯೋನಲ್ಲಿ ಅವರು ಜಾವೆಲಿನ್ ಎಸೆಯುವಾಗ ಫ್ಯಾಶನ್ ಐಕಾನ್ ಆಗಬಹುದೆಂದು ಯಾರೂ ನೆನಸಿರಲಿಲ್ಲ. ಅದಕ್ಕೆಂದೇ ಹೇಳಿದ್ದು, ಒಲಂಪಿಕ್ಸ್ ಬಳಿಕ ಅವರ ದೆಶೆಯೇ ಬದಲಾಗಿದೆ.

ಹಾಗೆ ನೋಡಿದರೆ, ನೀರಜ್ ಒಬ್ಬ ಫ್ಯಾಶನೇಬಲ್ ಅಥ್ಲೀಟ್ ಥರ ಕಾಣುತ್ತಾರೆ. ಮಾಡೆಲಿಂಗ್ ಮಾಡುವಾಗ ಲುಕ್ಸ್ ಹೇಗಿರಬೇಕು ಅಂತ ಅವರಿಗೆ ಗೊತ್ತಾಗಿಬಿಟ್ಟಿದೆ. ಈ ಫೋಟೋಗಳನ್ನೊಮ್ಮೆ ಗಮನಿಸಿ. ಒಂದರೆಡರಲ್ಲಿ ಸಣ್ಣದಾಗಿ ಕುರುಚಲು ಗಡ್ಡ ಬೆಳೆಸಿದ್ದಾರೆ. ಕೆದರಿದ ಕ್ರಾಪು ಅವರ ಪರ್ಸನಾಲಿಟಿಗೆ ಮೆರಗು ನೀಡುತ್ತಿದೆ.

ಮತ್ತೊಂದು ಫೋಟೋನಲ್ಲಿ ಹಚ್ಚ ಹಸಿರು ಬಣ್ಣದ ಮತ್ತು ಕುಸರಿ ಮಾಡಿದ ಗುಂಡು ಕೊರಳಿನ ಜಂಪರ್ ಜೊತೆ ಬೂದು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.

ಮತ್ತೊಂದು ಫೋಟೋನಲ್ಲಿ ಅವರದ್ದು ಪಕ್ಕದ ಮನೆ ಹುಡುಗನ ಲುಕ್. ಇದರಲ್ಲಿ ಅವರು ಬಿಳಿಬಣ್ಣದ ಟಿ-ಶರ್ಟ್ ಜೊತೆ ಮುಜಿ ಇಂಡಿಯಾ ಧರಿಸಿದ್ದು ಅದಕ್ಕೆ ಹರ್ಮೆಸ್ನ ಚೌಕುಳಿ ಜಾಕೆಟ್ ಜೊತೆಯಾಗಿಸಿದ್ದಾರೆ.

ಇದನ್ನೂ ಓದಿ:   ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​