‘ಅಪ್ಪು ನಿಧನದ ಸುದ್ದಿ ಕೇಳಿದಾಗ ರಾಡ್​ನಿಂದ ತಲೆಗೆ ಹೊಡೆದಂತೆ ಆಯ್ತು’; ಕರಾಳ ಕ್ಷಣದ ಬಗ್ಗೆ ಶಿವಣ್ಣನ ಮಾತು

‘ಅಪ್ಪು ನಿಧನದ ಸುದ್ದಿ ಕೇಳಿದಾಗ ರಾಡ್​ನಿಂದ ತಲೆಗೆ ಹೊಡೆದಂತೆ ಆಯ್ತು’; ಕರಾಳ ಕ್ಷಣದ ಬಗ್ಗೆ ಶಿವಣ್ಣನ ಮಾತು

TV9 Web
| Updated By: ಮದನ್​ ಕುಮಾರ್​

Updated on: Nov 11, 2021 | 1:31 PM

ಪುನೀತ್​ ರಾಜ್​ಕುಮಾರ್​​ ನಿಧನದಿಂದ ಅವರ ಕುಟುಂಬಕ್ಕೆ ತೀವ್ರ ನೋವಾಗಿದೆ. ಅ.29 ಎಂಬುದು ಇಡೀ ಕರುನಾಡಿನ ಪಾಲಿಗೆ ಕರಾಳ ದಿನ. ಅಂದು ಆದ ಸಂಕಟವನ್ನು ಶಿವರಾಜ್​ಕುಮಾರ್​ ಅವರು ವಿವರಿಸಿದ್ದಾರೆ.

ಪುನೀತ್​ ರಾಜ್​ಕುಮಾರ್​ ಇನ್ನಿಲ್ಲ ಎಂಬ ಸುದ್ದಿಯನ್ನು ಮೊದಲ ಬಾರಿಗೆ ಕೇಳಿದಾಗ ಇಡೀ ಕರುನಾಡಿಗೆ ಆಘಾತ ಆಗಿತ್ತು. ಅವರ ಕುಟುಂಬಕ್ಕೆ ಆದ ನೋವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅಂದು (ಅ.29) ಬೆಳಗ್ಗೆ ಶಿವಣ್ಣ ನಟಿಸಿದ್ದ ‘ಭಜರಂಗಿ 2’ ಚಿತ್ರ ರಿಲೀಸ್​ ಆಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿತ್ತು. ಆ ಖುಷಿಯ ಮಧ್ಯೆಯೇ ಅಪ್ಪು ನಿಧನದ ಸುದ್ದಿ ಸಿಡಿಲಿನಂತೆ ಬಂದೆರಗಿತ್ತು. ಆದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಶಿವರಾಜ್​ಕುಮಾರ್​ ವಿವರಿಸಿದ್ದಾರೆ. ಟಿವಿ9 ನಡೆಸಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಶಿವಣ್ಣ ಹಂಚಿಕೊಂಡಿದ್ದಾರೆ. ಸಹೋದರನ ಅಗಲಿಕೆಯ ನೋವನ್ನು ಅವರು ತೋಡಿಕೊಂಡಿದ್ದಾರೆ.

‘ಮೊದಲ ಬಾರಿಗೆ ಆ ಸುದ್ದಿ ಕೇಳಿದಾಗ ನನಗೆ ಮೈಯಲ್ಲಿ ನಡುಕು ಬಂತು. ಫೋನ್​ ತೆಗೆದು ಎಸೆದು, ಕೆಳಗೆ ಕುಳಿತುಕೊಂಡುಬಿಟ್ಟೆ. ನನ್ನ ತಮ್ಮನಿಗೆ ಯಾಕೆ ಹೀಗೆ ಆಯ್ತು? ಸಂಪೂರ್ಣ ಬ್ಲಾಂಕ್​ ಆದೆ. ತೀವ್ರವಾಗಿ ಕೋಪ ಬರುತ್ತಿತ್ತು. ಎಲ್ಲರಿಗೂ ಬಯ್ಯುತ್ತಿದ್ದೆ. ದೊಡ್ಡ ಒಂದು ರಾಡ್​ ತೆಗೆದುಕೊಂಡು ತಲೆಗೆ ಹೊಡೆದರೆ ಹೇಗೆ ಆಗುತ್ತೋ ಆ ರೀತಿ ನೋವು ಆಯಿತು. ಸಾಮಾನ್ಯವಾಗಿ ನಾನೇ ಗಾಡಿ ಓಡಿಸುತ್ತೇನೆ. ಅಂದು ನಾನು ಗಾಡಿ ಓಡಿಸುವುದಿಲ್ಲ ಅಂತ ಹೇಳಿ ಹಿಂದಿನ ಸೀಟ್​ನಲ್ಲಿ ಕುಳಿತೆ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

ಪುನೀತ್​ ನಿಧನದ ಬಳಿಕ ಜಿಮ್​ಗೆ ತೆರಳಲು ಯುವಕರ ಹಿಂದೇಟು; ಪೋಷಕರಲ್ಲೂ ಆವರಿಸಿದೆ ಭಯ

ಸಕ್ರೆಬೈಲು ಆನೆ ಮರಿಗೆ ಪುನೀತ್​ ಹೆಸರು; ವನ್ಯಜೀವಿಗಳ ಬಗ್ಗೆ ಅಪ್ಪುಗೆ ಇತ್ತು ವಿಶೇಷ ಕಾಳಜಿ