ತುಮಕೂರು: ಬಾಣಂತಿ ಊರಿನಿಂದ ಹೊರಗೆ, ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ

| Updated By: Rakesh Nayak Manchi

Updated on: Jul 18, 2023 | 3:26 PM

ತುಮಕೂರು ಜಿಲ್ಲೆಯ ಗೊಲ್ಲರಹಟ್ಟಿಯಲ್ಲಿ ಮೌಢ್ಯಾಚರಣೆ ಇನ್ನೂ ಜೀವಂತವಾಗಿದೆ. ಗೊಲ್ಲ ಸಮುದಾಯವು ಹೆರಿಗೆ ನಂತರ ಬಾಣಂತಿಯನ್ನು ಗ್ರಾಮದಿಂದ ಹೊರಗಿಟ್ಟ ಘಟನೆ ನಡೆದಿದೆ.

ತುಮಕೂರು, ಜುಲೈ 18: ಜಿಲ್ಲೆಯ ಗೊಲ್ಲರಹಟ್ಟಿಯಲ್ಲಿ (Gollarahatti) ಮೌಢ್ಯಾಚರಣೆ ಇನ್ನೂ ಜೀವಂತವಾಗಿದೆ. ಗೊಲ್ಲ ಸಮುದಾಯವು (Golla Community) ಹೆರಿಗೆ ನಂತರ ಬಾಣಂತಿಯನ್ನು ಗ್ರಾಮದಿಂದ ಹೊರಗಿಟ್ಟ ಘಟನೆ ನಡೆದಿದೆ. ಐದು ದಿನಗಳ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ವಸಂತ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಗಂಡು‌ ಮಗು ಸಾವನ್ನಪ್ಪಿದ್ದು, ನವಜಾತ ಹೆಣ್ಣು ಮಗು ತಾಯಿ ಮಾಡಿಲಿನಲ್ಲಿದೆ. ಆದರೆ ಮೌಢ್ಯಾಚರಣೆ ನಡೆಸುತ್ತಿರುವ ಗೊಲ್ಲ ಸಮುದಾಯದ ಜನರು, ಎರಡು ತಿಂಗಳ ಕಾಲ ಬಾಣಂತಿಯನ್ನು ಊರಿನಿಂದ ಹೊರಗಿಟ್ಟಿದ್ದಾರೆ. ಗುಡಿಸಲು ಮಾಡಿ ಅದರಲ್ಲಿ ಬಾಣಂತಿ ಮತ್ತು ಮಗುವನ್ನು ಇರಿಸಿದ್ದಾರೆ. ನಮ್ಮ ದೇವರಿಗೆ ಸೂತಕ ಆಗಲ್ಲ, ಹಾಗಾಗಿ ನಾವು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಗೊಲ್ಲ ಸಮುದಾಯದವರು ಹೇಳುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on