ರಾಜ್ಯಾದ್ಯಂತ 100 ಕಡೆ ಕಾಂಗ್ರೆಸ್ ಭವನ: ಕೋಟಿ ಕೋಟಿ ಮೌಲ್ಯದ ಸಿಎ ಸೈಟ್ ಮೂರ್ಕಾಸಿಗೆ ನೀಡಲು ಪತ್ರ

Updated on: Feb 08, 2026 | 5:08 PM

ಕರ್ನಾಟಕದಾದ್ಯಂತ 100 ಕಡೆಗಳಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಪಕ್ಷ ಮುಂದಾಗಿದೆ. ತಾಲೂಕು ಕೇಂದ್ರಗಳಲ್ಲೂ ಕಾಂಗ್ರೆಸ್ ಭವನ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕೋಟಿ ಕೋಟಿ ಬೆಲೆ ಬಾಳುವ ಸಿಎ ಸೈಟ್​​ಗಳನ್ನು ಕಾಂಗ್ರೆಸ್ ಟ್ರಸ್ಟ್​​ಗೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಹೌದು. ಪ್ರತಿ ತಾಲೂಕಿನಲ್ಲಿ ಕಾಂಗ್ರೆಸ್ ಭವನಕ್ಕೆ ಮುಂದಾಗಿರೋ ಕೆಪಿಸಿಸಿಗೆ ಈ ಜಾಗವನ್ನ ಪೌರಾಡಳಿತ ಇಲಾಖೆ ಕೊಟ್ಟಿದೆ.

ಬೆಂಗಳೂರು, (ಫೆಬ್ರವರಿ 08): ಕರ್ನಾಟಕದಾದ್ಯಂತ 100 ಕಡೆಗಳಲ್ಲಿ ಕಾಂಗ್ರೆಸ್ ಭವನ (Congress Bhavana) ನಿರ್ಮಾಣಕ್ಕೆ ಪಕ್ಷ ಮುಂದಾಗಿದೆ. ತಾಲೂಕು ಕೇಂದ್ರಗಳಲ್ಲೂ ಕಾಂಗ್ರೆಸ್ ಭವನ ಮಾಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ ಕೋಟಿ ಕೋಟಿ ಬೆಲೆ ಬಾಳುವ ಸಿಎ ಸೈಟ್​​ಗಳನ್ನು ಕಾಂಗ್ರೆಸ್ ಟ್ರಸ್ಟ್​​ಗೆ ಮಂಜೂರು ಮಾಡುವಂತೆ ರಾಜ್ಯ ಸರ್ಕಾರ ಪತ್ರ ಬರೆದಿದೆ. ಹೌದು. ಪ್ರತಿ ತಾಲೂಕಿನಲ್ಲಿ ಕಾಂಗ್ರೆಸ್ ಭವನಕ್ಕೆ ಮುಂದಾಗಿರೋ ಕೆಪಿಸಿಸಿಗೆ ಈ ಜಾಗವನ್ನ ಪೌರಾಡಳಿತ ಇಲಾಖೆ ಕೊಟ್ಟಿದೆ. ಇನ್ನೂ 13 ಜಿಲ್ಲೆಗಳಲ್ಲಿ ಪುರಸಭೆ, ನಗರ ಸಭೆಗಳ ಜಾಗವನ್ನ ಕಾಂಗ್ರೆಸ್ ಭವನ ಕಟ್ಟಲು ಕೊಟ್ಟಿರೋ ಪೌರಾಡಳಿತ ಇಲಾಖೆ ಕೊಟ್ಟಿದೆ. ಕಾನೂನು ಇಲಾಖೆ ವಿರೋಧದ ನಡುವೆಯೂ ಕಾಂಗ್ರೆಸ್ ಭವನಕ್ಕೆ ಜಾಗ ಕೊಟ್ಟಿರೋ ಬಗ್ಗೆಯೂ ಆರೋಪ ಇದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ವಿಡಿಯೋನಲ್ಲಿ ನೋಡಿ.

Loading...
Unable to load recommendations.
Follow Us
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More