ಕ್ರೆಸ್ಟ್ ಗೇಟ್ ಅನಾಹುತ; ರೈತರಿಗೆ ಎದುರಾಗಿರುವ ಸಮಸ್ಯೆಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು: ವಿಜಯೇಂದ್ರ

|

Updated on: Aug 12, 2024 | 5:01 PM

ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆಡಿರುವ ಮಾತಿಗೆ ಪ್ರತಿಕ್ರಿಯ ನೀಡಿದ ವಿಜಯೇಂದ್ರ, ಬಿಜೆಪಿ ನಾಯಕರು ರಾಜಕೀಯ ಮಾಡಲು ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿಲ್ಲ, ಅವರು ಮನಸ್ಸಿಗೆ ತೋಚಿದ ಹಾಗೆ ಮಾತಾಡುವುದು ನಿಲ್ಲಿಸಬೇಕು, ತಮಗೆ ರೈತರ ಹಿತಾಸಕ್ತಿ ರಾಜಕೀಯಕ್ಕಿಂತ ಮುಖ್ಯ ಎಂದು ಹೇಳಿದರು.

ಕೊಪ್ಪಳ: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ನಲ್ಲಿ ಉಂಟಾಗುರುವ ಸಮಸ್ಯೆಯನ್ನು ತಮ್ಮ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಮತ್ತು ರೈತರೊಂದಿಗೆ ಪರಿಶೀಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕ್ರೆಸ್ಟ್ ಗೇಟ್ ನಲ್ಲಿ ಆಗಿರುವ ಸರ್ಕಾರವೇ ನೇರವಾಗಿ ಹೊಣೆಯಾಗಿರುತ್ತದೆ, ಈ ಭಾಗದ ರೈತರಿಗೆ ಎದುರಾಗಿರುವ ಸಂಕಷ್ಟಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೂಡಲೇ ಸ್ಪಂದಿಸಿ ಪ್ರತಿ ಹೆಕ್ಟೇರ್ ಗೆ ₹ 50,000 ಪರಿಹಾರ ಧನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಕಳೆದ ಒಂದು ವರ್ಷದಿಂದ ಟಿಬಿ ಡ್ಯಾಂ ನಿಗಮಕ್ಕೆ ಚೀಫ್ ಇಂಜಿನೀಯರ್ ನಿಯುಕ್ತಿ ಮಾಡದ ಕಾರಣ ಜಲಾಶಯದ ನಿರ್ವಹಣೆಯಲ್ಲಿ ತೊಡಕು ಉಂಟಾಗಿದೆ, ಇಂಜಿನೀಯರ್ ನಿಯುಕ್ತಿ ಆಗದಿರುವುದಕ್ಕೆ ಜನ ಏನೆಲ್ಲ ಮಾತಾಡಿಕೊಳ್ಳುತ್ತಿದ್ದಾರೆ, ಅವರ ಮಾತುಗಳನ್ನು ಉಲ್ಲೇಖಿಸಲು ಇದು ಸೂಕ್ತ ವೇದಿಕೆ ಅಲ್ಲ ಎಂದು ವಿಜಯೇಂದ್ರ ಹೇಳಿದರು. ತಜ್ಞರು ನೀಡಿದ ಸಲಹೆಯನ್ನು ನಿರ್ಲಕ್ಷಿಸಿರುವ ಸರ್ಕಾರ ತನ್ನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ, ರೈತರ ನೆರವಿಗೆ ಅದು ಧಾವಿಸಬೇಕು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ತುಂಗಭದ್ರಾ ಡ್ಯಾಂ ಗೇಟ್ ಕಟ್​ಗೆ ಸ್ಫೋಟಕ ಕಾರಣ ಕೊಟ್ಟ ಎಚ್​​ಡಿಕೆ, ಜತೆಗೊಂದು ಸಲಹೆ