ಧರ್ಮ ಪ್ರಚಾರ ವಾಹನವಾದ ಪಂಚಾಯ್ತಿ ಸ್ವಚ್ಚತಾ ವಾಹನ: ಕಸ ಸಂಗ್ರಹಿಸುತ್ತ ಸಿಬ್ಬಂದಿಯಿಂದ ಕರಪತ್ರ ಹಂಚಿಕೆ

Edited By:

Updated on: Jan 24, 2026 | 5:07 PM

ಗ್ರಾಮ ಪಂಚಾಯಿತಿ  (Gram Panchayat ) ಸ್ವಚ್ಛತಾ ವಾಹನ ಇರುವುದು ವಾರ್ಡ್​ ವಾರ್ಡ್​​ಗಳಲ್ಲಿ ಸಂಚರಿಸಿ ಕಸ ಸಂಗ್ರಹಿಸಲು. ಆದ್ರೆ, ಕೋಲಾರ (Kolar) ಜಿಲ್ಲೆ ಬಂಗಾರಪೇಟೆ ತಾಲ್ಲುಕು ಗುಲ್ಲಹಳ್ಳಿ ಗ್ರಾಮದ ಪಂಚಾಯ್ತಿ ಸ್ವಚ್ಛತಾ ವಾಹನ ಧರ್ಮ ಪ್ರಚಾರ ನಡೆಸಿದ ಎನ್ನುವ ಆರೋಪ ಕೇಳಿಬಂದಿದೆ. ಹೌದು...ಗುಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಸ್ಚಚ್ಛತಾ ವಾಹನದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದ ಕರಪತ್ರಗಳು ಪತ್ತೆಯಾಗಿದ್ದು, ಸಿಬ್ಬಂದಿಗಳೇ ಕಸ ಸಂಗ್ರಹಿಸುತ್ತಾ ಮನೆ ಮನೆಗೆ ಕರಪತ್ರ ಹಂಚಿಕೆ ಮಾಡಿ ಕ್ರಿಶ್ಚಿಯನ್ ಧರ್ಮ ಪ್ರಚಾರ ನಡೆಸಿದ್ದಾರೆ

ಕೋಲಾರ, (ಜನವರಿ 24): ಗ್ರಾಮ ಪಂಚಾಯಿತಿ  (Gram Panchayat ) ಸ್ವಚ್ಛತಾ ವಾಹನ ಇರುವುದು ವಾರ್ಡ್​ ವಾರ್ಡ್​​ಗಳಲ್ಲಿ ಸಂಚರಿಸಿ ಕಸ ಸಂಗ್ರಹಿಸಲು. ಆದ್ರೆ, ಕೋಲಾರ (Kolar) ಜಿಲ್ಲೆ ಬಂಗಾರಪೇಟೆ ತಾಲ್ಲುಕು ಗುಲ್ಲಹಳ್ಳಿ ಗ್ರಾಮದ ಪಂಚಾಯ್ತಿ ಸ್ವಚ್ಛತಾ ವಾಹನ ಧರ್ಮ ಪ್ರಚಾರ ನಡೆಸಿದ ಎನ್ನುವ ಆರೋಪ ಕೇಳಿಬಂದಿದೆ. ಹೌದು…ಗುಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಸ್ಚಚ್ಛತಾ ವಾಹನದಲ್ಲಿ ಕ್ರಿಶ್ಚಿಯನ್ ಧರ್ಮ ಪ್ರಚಾರದ ಕರಪತ್ರಗಳು ಪತ್ತೆಯಾಗಿದ್ದು, ಸಿಬ್ಬಂದಿಗಳೇ ಕಸ ಸಂಗ್ರಹಿಸುತ್ತಾ ಮನೆ ಮನೆಗೆ ಕರಪತ್ರ ಹಂಚಿಕೆ ಮಾಡಿ ಕ್ರಿಶ್ಚಿಯನ್ ಧರ್ಮ ಪ್ರಚಾರ ನಡೆಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಚಚ್ಚತಾ ಸಿಬ್ಬಂದಿ ಶಶಿಕಲಾ, ನಾಗವೇಣಿ, ವೆಂಕಟರತ್ನ ವಿರುದ್ಧ ಕರಪತ್ರ ಹಂಚಿಕೆ ಆರೋಪ ಕೇಳಿಬಂದಿದ್ದು, ಇವರು ಮನೆ ಮನೆಯ ಕಸ ಸಂಗ್ರಹಿಸಿ ಜತೆ ಕರಪತ್ರ ಹಂಚಿಕೆ ಮಾಡಿದ್ದಾರೆ ಎಂದು ಜನವರು ವಾಹನವನ್ನು ತಡೆದು ತರಾಟಗೆ ತೆಗೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.