ಹೆಬ್ಬಾಳ್ಕರ್ ಕ್ಷೇತ್ರದಲ್ಲೇ ಸುಲಿಗೆ; ಗೃಹ ಲಕ್ಷ್ಮಿ ನೋಂದಣಿಗೆ ಹಣ ಪಡೆದದ್ದನ್ನು ಪ್ರಶ್ನಿಸಿದಕ್ಕೆ ಗ್ರಾಮ ಒನ್ ಸಿಬ್ಬಂದಿ ಆವಾಜ್

| Updated By: ಆಯೇಷಾ ಬಾನು

Updated on: Jul 29, 2023 | 1:41 PM

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಸಿಬ್ಬಂದಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆಯುತ್ತಿದ್ದು ಆವಾಜ್ ಹಾಕಿದ್ದಾರೆ.

ಚಿಕ್ಕೋಡಿ, ಜುಲೈ 29: ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆಯಬಾರದು. ಪಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ ಎಂದು ಸಿಎಂ ಸಿದ್ದರಾಮಯ್ಯ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಆದ್ರೆ ರಾಜ್ಯದಲ್ಲಿ ಅರ್ಜಿ ಸಲ್ಲಿಕೆಗೆ ಸರ್ಕಾರಿ ಸಿಬ್ಬಂದಿಯೇ ಕೈಚಾಚುತ್ತಿದ್ದು ಇಲ್ಲೊಬ್ಬ ಸಿಬ್ಬಂದಿ ಸರ್ಜಿ ಸಲ್ಲಿಸಲು ಬಂದಿದ್ದವರಿಗೆಯೇ ಅವಾಜ್ ಹಾಕಿದ್ದಾನೆ. ಲಕ್ಷ್ಮೀ ಹೆಬ್ಬಾಳ್ಕರ್, ನೀನು ಸೇರಿ ನನ್ನ ಖಾತೆಗೆ 18 ಸಾವಿರ ರೂ. ಹಾಕಿ, ಆಗ ನಾನು ಹಣ ಪಡೆಯದೆ ಫ್ರೀ ಆಗಿ ಅರ್ಜಿ ಸಲ್ಲಿಸಲು ಸಹಕರಿಸುವೆ ಎಂದು ಅವಾಜ್ ಹಾಕಿದ್ದಾನೆ.

ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅವರಖೋಡ ಗ್ರಾಮದ ಗ್ರಾಮ ಒನ್ ಸಿಬ್ಬಂದಿ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಗೆ ಹಣ ಪಡೆಯುತ್ತಿದ್ದು ಆವಾಜ್ ಹಾಕಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದೆ. ಸಿಬ್ಬಂದಿ ಹಾಲಪ್ಪ ಲೋಕೂರ್ ಗೃಹಲಕ್ಷ್ಮೀ ಯೋಜನೆ ಅರ್ಜಿ ಸಲ್ಲಿಕೆಯನ್ನೇ ದಂಧೆ ಮಾಡಿಕೊಂಡಿದ್ದು ಅರ್ಜಿ ಸಲ್ಲಿಕೆಗೆ 100 ರೂ. ಪಡೆಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕರಿಗೆ ಆವಾಜ್ ಹಾಕಿದ್ದಾರೆ. ಅರ್ಜಿ ಸಲ್ಲಿಕೆಗೆ ಹಣ ಏಕೆ ಪಡಿತೀರಾ ಎಂದು ಪ್ರಶ್ನೆ ಮಾಡಿದಕ್ಕೆ. ನಾವು ಕುಳಿತು ಫ್ರೀಯಾಗಿ ದುಡಿಯೋಣ್ವಾ? ಫ್ರೀ ಆಗಿ ಏಕೆ ಅರ್ಜಿ ಸಲ್ಲಿಕೆ ಮಾಡಬೇಕು? ನೀನೇನು ನನ್ನ ಕೇಳ್ತೀಯಾ? ನೂರು ರೂಪಾಯಿ ಪಡೆದೆ ಪಡೀತಿನಿ ಏನ್ ಈವಾಗ? ಬಂದ್ ಮಾಡಿಸ್ತೀಯಾ? ಅಂತಾ ಆವಾಜ್ ಲಕ್ಷ್ಮೀ ಹೆಬ್ಬಾಳ್ಕರ್, ನೀನು ಸೇರಿ ನನ್ನ ಖಾತೆಗೆ 18 ಸಾವಿರ ರೂ. ಹಾಕಿ, ಆಗ ನಾನು ಹಣ ಪಡೆಯದೆ ಫ್ರೀ ಆಗಿ ಅರ್ಜಿ ಹಾಕ್ತೀನಿ ಎಂದು ಆವಾಜ್ ಹಾಕಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Published on: Jul 29, 2023 01:40 PM