Mangalore News: ರೈಲು ಹತ್ತುವಾಗ ಆಯತಪ್ಪಿ ಬೀಳುತ್ತಿದ್ದ ವೃದ್ಧನನ್ನು ರಕ್ಷಣೆ ಮಾಡಿದ ಆರ್‌ಪಿಎಫ್ ಸಿಬ್ಬಂದಿ; ವಿಡಿಯೋ ವೈರಲ್
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ರೈಲಿನ ಬೋಗಿ ಹತ್ತುವಾಗ ಆಯತಪ್ಪಿ ಬೀಳುತ್ತಿದ್ದ ವೃದ್ಧನನ್ನು ಆರ್‌ಪಿಎಫ್ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ.
ಮಂಗಳೂರು, ಜು.29: ನಗರದ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ರೈಲಿನ ಬೋಗಿ ಹತ್ತುವಾಗ ಆಯತಪ್ಪಿ ಬೀಳುತ್ತಿದ್ದ ವೃದ್ಧನನ್ನು ಆರ್‌ಪಿಎಫ್(RPF) ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ನಡೆದಿದೆ. ಗುರುವಾರ (ಜು.27) ಸಂಜೆ 6.15ಕ್ಕೆ ಮಂಗಳೂರಿನ(Mangalore) ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಮಲಬಾರ್ ಎಕ್ಸ್‌ಪ್ರೆಸ್ ರೈಲು ತೆರಳುತ್ತಿತ್ತು. ಈ ವೇಳೆ ಚಲಿಸುತ್ತಿದ್ದ ರೈಲನ್ನು ಶಂಕರ್ ಬಾಬು ಎಂಬ 70 ವರ್ಷದ ಪ್ರಯಾಣಿಕ ಹತ್ತುವಾಗ ಆಯತಪ್ಪಿ ಬೀಳುತ್ತಿದ್ದರು. ಕೂಡಲೇ ಆರ್‌ಪಿಎಫ್ ಸಿಬ್ಬಂದಿ ಪ್ರಕಾಶ್ ಎಂಬುವವರು ಆತನನ್ನ ರಕ್ಷಣೆ ಮಾಡಿದ್ದಾರೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನು ಸಿಬ್ಬಂದಿ ಅದನ್ನ ಗಮನಿಸದಿದ್ದರೆ ರೈಲಿನ ನಡುವೆ ಸಿಲುಕುವ ಸಾಧ್ಯತೆ ಇತ್ತು. ವೃದ್ಧ ಶಂಕರ್ ಬಾಬು ಕೇರಳದ ಕಣ್ಣೂರಿನ ವಯಲ್‌ವೀಡು ನಿವಾಸಿಯಾಗಿದ್ದಾರೆ. ಅವರ ಬಲಗಾಲಿನ ಬೆರಳಿಗೆ ಗಾಯವಾಗಿದ್ದು, ಸಧ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್

ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ

ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
