ಬೆಂಗಳೂರು ಸರಣಿ ಅಪಘಾತ: ಕ್ಯಾಂಟರ್ ಚಲಿಸುತ್ತಿದ್ದ ವೇಗಕ್ಕೆ ಪ್ರಾಣಪಾಯ ಜರುಗದಿರುವುದೇ ಅದೃಷ್ಟ: ಪ್ರತ್ಯಕ್ಷದರ್ಶಿ

ಅರುಣ್​ ಕುಮಾರ್​ ಬೆಳ್ಳಿ

Updated on: Mar 15, 2025 | 11:09 AM

ನಗರಪ್ರದೇಶಗಳಲ್ಲಿ ಸರಣಿ ಅಪಘಾತ ನಡೆದಾಗ ಹೆಚ್ಚು ಹಾನಿಗೊಳಗಾಗೋದು ಆಟೋರಿಕ್ಷಾಗಳು ಅನ್ನೋದು ಸುಳ್ಳಲ್ಲ. ಅವರ ಕುಟುಂಬಗಳು ನಡೆಯೋದು ದಿನದ ಸಂಪಾದನೆಯಿಂದ. ಬೆಳಗಿನ ಜಾವವೇ ಆಟೋರಿಕ್ಷಾ ಅಪಘಾತಕ್ಕೊಳಗಾಗಿ ಗ್ಯಾರೇಜಿಗೆ ಬಂದರೆ ಅವತ್ತಿನ ಸಂಪಾದನೆ ಖೋತಾ. ಕುಡುಕ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಬೆಂಗಳೂರು, 15 ಮಾರ್ಚ್: ಪ್ರತ್ಯಕ್ಷದರ್ಶಿಗಳು (eyewitness) ಹೇಳುವ ಪ್ರಕಾರ ಇಂದು ಬೆಳಗಿನ ಜಾವ ಬೆಂಗಳೂರಿನ ಸ್ಯಾಟೆಲೈಟ್ ಬಸ್ ನಿಲ್ದಾಣದ ಬಳಿ ನಡೆದ ಸರಣಿ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಜರುಗದಿರುವುದೇ ಅದೃಷ್ಟ. ಅಪಘಾತ ಮಾಡಿದ ಕ್ಯಾಂಟರ್ ಚಾಲಕ ಕುಡಿದಿದ್ದ ಮತ್ತು ಸುಮಾರು 100 ಕಿಮೀ/ಗಂಟೆ ವೇಗದಲ್ಲಿ ವಾಹನವನ್ನು ಓಡಿಸುತ್ತಿದ್ದ. ಅವನು ವಾಹನ ಓಡಿಸುತ್ತಿದ್ದ ರಭಸಕ್ಕೆ ಡಿವೈಡರ್ ಗಳು ಸಹ ಕಿತ್ತುಹೋಗಿವೆ ಎಂದು ಭಯಾನಕ ದೃಶ್ಯವನ್ನು ಕಣ್ಣಾರೆ ನೋಡಿದ ಆಟೋರಿಕ್ಷಾ ಚಾಲಕರು ಹೇಳುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬಾಗಲಕೋಟೆ: ಸರಣಿ ಅಪಘಾತದಲ್ಲಿ ಮೂವರ ಸಾವು

Published on: Mar 15, 2025 11:09 AM
Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.