AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ: ಸರಣಿ ಅಪಘಾತದಲ್ಲಿ ಮೂವರ ಸಾವು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರು ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಟಾಟಾ ಏಸ್ ವಾಹನ ಮತ್ತು ಕಾರಿನ ನಡುವಿನ ಡಿಕ್ಕಿಯಿಂದ ಮೂವರು ಸಾವನ್ನಪ್ಪಿದ್ದಾರೆ. ಮಹಾಂತೇಶ್ ಹೊನಕಟ್ಟಿ, ಭೀಮಪ್ಪ ಗಂಟೆಣ್ಣವರ ಮತ್ತು ಆನಂದ ಮೃತ ದುರ್ದೈವಿಗಳು. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಾಗಲಕೋಟೆ: ಸರಣಿ ಅಪಘಾತದಲ್ಲಿ ಮೂವರ ಸಾವು
ಜಖಂ ಆದ ಕಾರು
Follow us
ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on:Feb 02, 2025 | 7:23 AM

ಬಾಗಲಕೋಟೆ, ಫೆಬ್ರವರಿ 01: ಬಾಗಲಕೋಟೆ (Bagalkot) ಜಿಲ್ಲೆಯ ಜಮಖಂಡಿ (Jamakandi) ತಾಲೂಕಿನ ಆಲಗೂರು ಗ್ರಾಮದ ಬಳಿ ಸಂಭವಿಸಿದ ಸರಣಿ‌ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಮಹಾಂತೇಶ್ ಹೊನಕಟ್ಟಿ (35, ಬೆಳಗಾವಿ ಜಿಲ್ಲೆಯ ಅರಬಾವಿ ನಿವಾಸಿ ಭೀಮಪ್ಪ ಗಂಟೆಣ್ಣವರ (೪೨), ಜಮಖಂಡಿ ತಾಲ್ಲೂಕಿನ ಜಂಬಗಿ ಬಿಕೆ ಗ್ರಾಮದ ನಿವಾಸಿ ಆನಂದ ಬಾಡಗಿ (22) ಮೃತ ದುರ್ದೈವಿಗಳು.

ನಸುಕಿನ ಜಾವ ಜಮಖಂಡಿ‌ಯಿಂದ ವಿಜಯಪುರಕ್ಕೆ ಟಾಟಾ ಏಸ್ ವಾಹನ ಹೊರಟಿತ್ತು. ಕಾರು ವಿಜಯಪುರದಿಂದ ಜಮಖಂಡಿಗೆ ಬರುತ್ತಿತ್ತು. ಕಾರು ಜಾಗೂ ಟಾಟಾ ಏಸ್ ವಾಹನ ಪರಸ್ಪರ ಡಿಕ್ಕಿಯಾಗಿವೆ. ಟಾಟಾ ಏಸ್ ವಾಹನಕ್ಕೆ ಹಿಂಬದಿಯಿದ್ದ ಎರಡು ಬೈಕಗಳು ಡಿಕ್ಕಿ ಹೊಡೆದಿವೆ. ಸ್ಥಳಕ್ಕೆ ಜಮಖಂಡಿ‌ ಸಿಪಿಐ ಮಲ್ಲಪ್ಪ ಮಡ್ಡಿ, ಪಿಎಸ್​​ಐ ಗಂಗಾಧರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:13 am, Sat, 1 February 25