Video: 25 ಕಳ್ಳರಿಂದ ಆಭರಣದಂಗಡಿ ದರೋಡೆ, ಗ್ರಾಹಕರಾ, ಕಳ್ಳರಾ ನೋಡುವಷ್ಟರಲ್ಲಿ ಆಭರಣಗಳು ಮಂಗಮಾಯ
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಆಭರಣದ ಅಂಗಡಿಗೆ 25 ಮಂದಿ ಕಳ್ಳರು ಶಸ್ತ್ರಾಸ್ತ್ರಗಳ ಸಮೇತ ನುಗ್ಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಂಗಡಿಯಲ್ಲಿ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ. ಇಲ್ಲಿಯವರೆಗೆ 7 ಶಂಕಿತರನ್ನು ಬಂಧಿಸಲಾಗಿದೆ. ಕೆಲವು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಸುಕುಧಾರಿಗಳ ಬಳಿ ಬಂದೂಕು ಕೂಡಾ ಇತ್ತು. ಎರಡು ವರ್ಷಗಳಲ್ಲಿ ಹೆಲ್ಲರ್ ಜ್ಯುವೆಲ್ಲರ್ಸ್ ಅನ್ನು ಗುರಿಯಾಗಿಸಿಕೊಂಡು ಭಾರಿ ದರೋಡೆ ನಡೆಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2023 ರಲ್ಲಿ ಸೇಂಟ್ ಪ್ಯಾಟ್ರಿಕ್ ದಿನದಂದು ಏಳು ಮುಸುಕುಧಾರಿಗಳ ಗುಂಪು ಇದೇ ರೀತಿ ಅಂಗಡಿಗೆ ನುಗ್ಗಿ ಕೋಟಿಗಟ್ಟಲೆ ಬೆಲೆ ಬಾಳುವ ಆಭರಣಗಳನ್ನು ದೋಚಿದ್ದರು.
ಕ್ಯಾಲಿಫೋರ್ನಿಯಾ, ಸೆಪ್ಟೆಂಬರ್ 25: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಆಭರಣದ ಅಂಗಡಿಗೆ 25 ಮಂದಿ ಕಳ್ಳರು ಶಸ್ತ್ರಾಸ್ತ್ರಗಳ ಸಮೇತ ನುಗ್ಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಂಗಡಿಯಲ್ಲಿ ಸುಮಾರು 9 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಲೂಟಿ ಮಾಡಿದ್ದಾರೆ. ಇಲ್ಲಿಯವರೆಗೆ 7 ಶಂಕಿತರನ್ನು ಬಂಧಿಸಲಾಗಿದೆ. ಕೆಲವು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಸುಕುಧಾರಿಗಳ ಬಳಿ ಬಂದೂಕು ಕೂಡಾ ಇತ್ತು. ಎರಡು ವರ್ಷಗಳಲ್ಲಿ ಹೆಲ್ಲರ್ ಜ್ಯುವೆಲ್ಲರ್ಸ್ ಅನ್ನು ಗುರಿಯಾಗಿಸಿಕೊಂಡು ಭಾರಿ ದರೋಡೆ ನಡೆಸುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2023 ರಲ್ಲಿ ಸೇಂಟ್ ಪ್ಯಾಟ್ರಿಕ್ ದಿನದಂದು ಏಳು ಮುಸುಕುಧಾರಿಗಳ ಗುಂಪು ಇದೇ ರೀತಿ ಅಂಗಡಿಗೆ ನುಗ್ಗಿ ಕೋಟಿಗಟ್ಟಲೆ ಬೆಲೆ ಬಾಳುವ ಆಭರಣಗಳನ್ನು ದೋಚಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Sep 25, 2025 02:38 PM