AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 ದಿನ 'ಕಾವೇರಿ ಆರತಿ': ಯಾವಾಗಿನಿಂದ? ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ

5 ದಿನ ‘ಕಾವೇರಿ ಆರತಿ’: ಯಾವಾಗಿನಿಂದ? ಹೇಗೆ? ಎಲ್ಲಿ? ಇಲ್ಲಿದೆ ಮಾಹಿತಿ

ಭಾವನಾ ಹೆಗಡೆ
|

Updated on: Sep 25, 2025 | 3:54 PM

Share

ಮೈಸೂರು ದಸರಾ ಪ್ರಯುಕ್ತ ನಡೆಯುವ ಕಾವೇರಿ ಆರತಿ ಕುರಿತು ಸಚಿವ ಚೆಲುವರಾಯಸ್ವಾಮಿ ಮಾಹಿತಿ ಹಂಚಿಕೊಂಡಿದ್ದಾರೆ. ನಾಳೆ ಆರತಿಯ ಉದ್ಘಾಟನೆ ನಡೆಯಲಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಲಹೆಯ ಮೇರೆಗೆ ಸಧ್ಯಕ್ಕೆ ಇರುವ ಜಾಗದಲ್ಲಿಯೇ ಆರತಿಯನ್ನು ನಡೆಸಲಿದ್ದೇವೆ. ಕೋರ್ಟ್​ನಿಂದ ಸಲಹೆ ಬಂದ ಬಳಿಕ ನಿರ್ದಿಷ್ಠ ಜಾಗದ ತಯಾರಿ ಮಾಡಬೇಕೆಂದಿದ್ದೇವೆ ಎಂದರು.

ಮೈಸೂರು, ಸೆಪ್ಟೆಂಬರ್ 25 : ಮೈಸೂರಿನಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾದ ಪ್ರಯುಕ್ತವಾಗಿ ಕಾವೇರಿ ಆರತಿಯನ್ನುಆಯೋಜಿಸಲಾಗುತ್ತಿದೆ. ಈ ಕುರಿತು ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಕಾವೇರಿ ಆರತಿಗಾಗಿ ಯಾವುದೇ ತಯಾರಿಯಿಲ್ಲದೆ  ಇರುವ ಜಾಗದಲ್ಲೇ ಮಾಡಬೇಕು ಎಂದುಕೊಂಡಿದ್ದೇವೆ. ನಾಳೆ (ಸೆ.26) ಡಿಸಿಎಂ ಡಿ.ಕೆ ಶಿವಕುಮಾರ್ ಇದಕ್ಕೆ ಚಾಲನೆ ನೀಡಿ, ಸತತ 5 ದಿನಗಳ ವರೆಗೆ ಆರತಿ ನೆರವೇರಿಸುವಂತೆ ಹೇಳಿದ್ದಾರೆ. ಕೋರ್ಟ್​ ತೀರ್ಪಿನ ನಂತರ ಇದಕ್ಕೊಂದು ಶಾಶ್ವತ ಜಾಗವನ್ನು ಏರ್ಪಡಿಸುತ್ತೇವೆ. ನಾಳಿನ ಉದ್ಘಾಟನೆಗೆ ಶ್ರೀರಂಗಪಟ್ಟಣ, ಮಂಡ್ಯ, ಪಾಂಡುಪುರ ಜನರನ್ನು ನಾವು ವಿಶೇಷವಾಗಿ ಆಹ್ವಾನಿಸಿದ್ದೇವೆ. ಅದಾದ ನಂತರದ 5 ದಿನಗಳಲ್ಲಿ ಒಂದೊಂದು ತಾಲೂಕಿನವರೂ ಬರಬಹುದು ಎಂದಿದ್ದಾರೆ. ಈ ವೀಡಿಯೋ ನೋಡಿ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Bhavana Hegde
Bhavana Hegde

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More