Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ ಲಾಟರಿ! ಗೃಹಲಕ್ಷ್ಮೀ ಯೋಜನೆ ಗ್ಯಾರಂಟಿ ಹಣ ಬಂದಿಲ್ಲ ಎಂದು ಮಹಿಳೆಯರು ಕಂಗಾಲು, ಬ್ಯಾಂಕ್​​ ಎದುರು ಕೊನೆಯಿಲ್ಲದ ಸಾಲು!

ಅಬ್ಬಬ್ಬಾ ಲಾಟರಿ! ಗೃಹಲಕ್ಷ್ಮೀ ಯೋಜನೆ ಗ್ಯಾರಂಟಿ ಹಣ ಬಂದಿಲ್ಲ ಎಂದು ಮಹಿಳೆಯರು ಕಂಗಾಲು, ಬ್ಯಾಂಕ್​​ ಎದುರು ಕೊನೆಯಿಲ್ಲದ ಸಾಲು!

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Updated By: ಸಾಧು ಶ್ರೀನಾಥ್​

Updated on: Sep 05, 2023 | 12:36 PM

Gruha Lakshmi Scheme Effect: ರಾಜ್ಯ ಸರ್ಕಾರದ ನಾಲ್ಕನೇ ಗ್ಯಾರಂಟಿ ಗೃಹಲಕ್ಷ್ಮೀ ಯೋಜನೆ ಜಾರಿ ಆಗಿದೆ.. ಮನೆಯೊಡತಿಯರ ಖಾತೆಗೆ 2 ಸಾವಿರ ಹಣ ಕೂಡ ಹೋಗಿದೆ.. ಆದ್ರೆ, ಮೆಸೇಜ್ ಬಾರದೆ ನಾರಿಮಣಿಯರು ಗೊಂದಲಕ್ಕೀಡಾಗಿದ್ರು.. ಹೀಗಾಗಿ ಚಿಕ್ಕಮಗಳೂರಿನಲ್ಲಿ ಬ್ಯಾಂಕ್​ ಬಳಿ ದೊಡ್ಡ ಸೀನ್ ಕ್ರಿಯೇಟ್ ಆಗಿತ್ತು.

ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆ ಗೃಹಲಕ್ಷ್ಮೀಗೆ ಅದ್ದೂರಿ ಚಾಲನೆ ಸಿಕ್ಕಿಯಾಗಿದೆ.. ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ 2000 ಹಣವನ್ನೂ ಸರ್ಕಾರ ಕ್ರೆಡಿಟ್ ಮಾಡಿದ್ರೆ. ಮಹಿಳೆಯರಿಗೆ ತಮ್ಮ ಬ್ಯಾಂಕ್ ಖಾತೆಗೆ ಕಾಂಗ್ರೆಸ್ ದುಡ್ಡು ಬಂದಿದೆಯೋ ಇಲ್ವೋ ಅನ್ನೋ ಡೌಟ್ . ಇದ್ರಿಂದ ತಮ್ಮ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿಸಲು ಬೆಳಗ್ಗಿನಿಂದ ಮಹಿಳೆಯರ ದಂಡೆ ಬ್ಯಾಂಕ್ ಮುಂದೆ ಕ್ಯೂ ನಿಂತಿತ್ತು..

ಅಗಸ್ಟ್ 30 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯ ಸರ್ಕಾರ ಮಹತ್ವದ ಗ್ಯಾರಂಟಿ ಗೃಹಲಕ್ಷ್ಮೀಗೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ರಾಜ್ಯದ ಫಲಾನುಭವಿ ಮಹಿಳೆಯರ ಖಾತೆಗೆ ಅಂದೆ ಎರಡು ಸಾವಿರ ರೂಪಾಯಿ ಹಣವನ್ನ ಸರ್ಕಾರ ಕ್ರೆಡಿಟ್ ಮಾಡಲಾಗಿದೆ. ಹಣ ಖಾತೆಗೆ ಬಂದ ಬ್ಯಾಂಕಿನ ಮೆಸೇಜ್ ಕೆಲ ಮಹಿಳೆಯರಿಗೆ ಬಂದಿದ್ರೆ ಇನ್ನೂ ಕೆಲವು ಮಹಿಳೆಯರಿಗೆ ಬ್ಯಾಂಕಿನಿಂದ ಮೆಸೇಜ್ ಬಂದಿಲ್ಲ ಇದ್ರಿಂದ ಏನಾದ್ರೂ ಆಗ್ಲಿ ಒಮ್ಮೆ ಗೃಹಲಕ್ಷ್ಮೀ ಹಣ ಬ್ಯಾಂಕ್ ಅಕೌಂಟ್ ಗೆ ಬಂದಿದ್ದೆಯೋ ಇಲ್ವೋ ಚೆಕ್ ಮಾಡೇ ಬಿಡೋಣ ಅಂತ ಚಿಕ್ಕಮಗಳೂರು ನಗರದ ಎಂ.ಜಿ ರಸ್ತೆಯಲ್ಲಿರುವ IDBI ಬ್ಯಾಂಕಿನ ಮುಂದೆ ಸಾವಿರಾರು ಮಹಿಳೆಯರು ಕ್ಯೂ ನಿಂತಿದ್ರು.ಬೆಳಗ್ಗೆ 7 ಗಂಟೆಯಿಂದ ಬ್ಯಾಂಕಿನ ಮುಂದೆ ನಿಂತಿದ್ದ ಮಹಿಳೆಯರನ್ನ ನಿಯಂತ್ರಿಸಲು ಪೊಲೀಸರು ಬ್ಯಾಂಕ್ ಸಿಬ್ಬಂದಿ ಹರಸಾಹಸ ಪಟ್ರು.

ಚಿಕ್ಕಮಗಳೂರಿನ ಎಂಜಿ ರಸ್ತೆಯಲ್ಲಿರುವ IDBI ಬ್ಯಾಂಕಿನ ಮುಂದೆ ಬೆಳಗ್ಗೆಯಿಂದ ತಿಂಡಿ ಊಟವನ್ನ ಬಿಟ್ಟು ಪುಟ್ಟ ಮಕ್ಕಳ ಜೊತೆ ಮಹಿಳೆಯರು ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿಸಲು ಬಂದಿದ್ರು. ಮಹಿಳೆಯರ ದಂಡು ಹೆಚ್ಚುತ್ತಿದ್ದಂತೆ ಬ್ಯಾಂಕಿಗೆ ಪೊಲೀಸ್ ಭದ್ರತೆಯನ್ನ ನೀಡಲಾಯಿತು. ಪೊಲೀಸರ ಭದ್ರತೆಯಲ್ಲಿ ಒಬ್ಬೊಬ್ಬರನ್ನೆ ಬ್ಯಾಂಕಿನ ಒಳಗೆ ಬಿಡಲಾಯಿತು. ಮಹಿಳೆಯರ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ,ಮಾಡಿ ಬ್ಯಾಂಕ್ ಸಿಬ್ಬಂದಿಗಳು ಹೈರಾಣ ಆಗಿದ್ದು ಮಾತ್ರ ಸುಳ್ಳಲ್ಲ

ತಮ್ಮ ಖಾತೆಗೆ ಕಾಂಗ್ರೆಸ್ ಸರ್ಕಾರದ ಗೃಹ ಲಕ್ಷ್ಮೀ ಹಣ ಬಂದಿದ್ಯೋ ಇಲ್ವಾ ಅಂತ ಚೆಕ್ ಮಾಡಲು ಮನೆಯ ಲಕ್ಷ್ಮಿಯರು ಬ್ಯಾಂಕಿನ ಮುಂದೆ ಕ್ಯೂ ನಿಂತು ಸುಸ್ತಾಗಿದ್ರೆ. ಬ್ಯಾಂಕಿಗೆ ಬಂದ ಮಹಿಳೆಯರ ಅಕೌಂಟ್ ಬ್ಯಾಲೆನ್ಸ್ ಚೆಕ್ ಮಾಡಿ ಮಾಡಿ ಬ್ಯಾಂಕ್ ಸಿಬ್ಬಂದಿ ಕಂಗಾಲಾಗಿ ಹೋಗಿದ್ರು ಇನ್ನು ಮಹಿಳೆಯರ ದಂಡನ್ನ ಬೆಳಗ್ಗಿನಿಂದ ನಿಯಂತ್ರಿಸಲು ಪೊಲೀಸರು ಕೈಯಲ್ಲಿ ಲಾಠಿ ಹಿಡಿಯುವ ಸ್ಥಿತಿ ಬಂದಿದ್ದು ಮಾತ್ರ ಸುಳ್ಳಲ್ಲ.