BPL ಕಾರ್ಡ್ ರದ್ದಾದ್ರೆ ಗೃಹಲಕ್ಷ್ಮಿ ಹಣ ಬರಲ್ವಾ? ಅಂತೆ-ಕಂತೆಗಳಿಗೆ ತೆರೆ ಎಳೆದ ಸಚಿವೆ ಲಕ್ಷ್ಮೀ ಹೆಬ್ಬಾಳರ್
ಬಿಪಿಎಲ್ ಕಾರ್ಡ್, ಬಡವರ ಪಾಲಿನ ಆಶಾಕಿರಣ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಅನುಕೂಲ. ಆದರೆ, ನಿಯಮಾವಳಿಗಳನ್ನೇ ಮೀರಿ ಬಿಪಿಎಲ್ ಕಾರ್ಡ್ ಸೌಲಭ್ಯ ಪಡೆಯುತ್ತಿರುವ ಜನರಿಗೆ ಇದೀಗ ಶಾಕ್ ಎದುರಾಗಿದೆ. ಸದ್ಯ ಕೆಲವರ ಬಿಪಿಎಲ್ ಕಾರ್ಡ್ಗಳನ್ನು ಎಪಿಎಲ್ಗೆ ವರ್ಗಾವಣೆ ಮಾಡಲಾಗುತ್ತಿದೆ. ಇದರಿಂದ ಗೃಹಲಕ್ಷ್ಮೀ ಯೋಜನೆಗೆ ಹೊಡೆತಬೀಳುತ್ತಾ ಎನ್ನುವುದಕ್ಕೆ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರು, (ನವೆಂಬರ್ 20): ರಾಜ್ಯ ಸರ್ಕಾರದಿಂದ ಅನರ್ಹ ಬಿಪಿಎಲ್ ಕಾರ್ಡ್ದಾರರ ಮೆಗಾ ಆಪರೇಷನ್ ನಡೆಯುತ್ತಿದೆ. ಅನರ್ಹ ಬಿಪಿಎಲ್ ಕಾರ್ಡ್ ಫಲಾನುಭವಿಗಳೇ ಹೆಚ್ಚು ಇರುವ ಶಾಕಿಂಗ್ ಮಾಹಿತಿ ಬಯಲಾಗಿದೆ. ರಾಜ್ಯದಲ್ಲಿ ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ದಾರರು ಇದ್ದಾರೆ ಎಂಬ ಸತ್ಯಸಂಗತಿ ಬಯಲಾಗಿದೆ. ಕಳೆದ ಆಗಸ್ಟ್ ತಿಂಗಳಿನಲ್ಲೇ ಆಹಾರ ಇಲಾಖೆಗೆ ಇ ಗವರ್ನೆನ್ಸ್ ಇಲಾಖೆ ಮಾಹಿತಿ ಕೊಟ್ಟಿದೆ. ಇನ್ನು ಅವುಗಳನೆಲ್ಲವನ್ನೂ ಇದೀಗ ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆ ಮಾಡುವ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ. ಆದ್ರೆ, ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆಯಾದರೆ ಗೃಹಲಕ್ಷ್ಮೀ ಯೋಜನೆಯ 2000 ರೂ. ಬರುವ ಹಣ ನಿಲ್ಲುತ್ತಾ? ಎನ್ನುವ ಚರ್ಚೆಗಳು ನಡೆದಿದೆ. ಇದೀಗ ಇದಕ್ಕೆ ಸ್ವತಃ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದು, ಬಿಪಿಎಲ್ ಕಾರ್ಡ್ನಿಂದ ಎಪಿಎಲ್ ಕಾರ್ಡ್ಗೆ ವರ್ಗಾವಣೆಯಾಗಿದ್ದರೂ ಸಹ ಗೃಹ ಲಕ್ಷ್ಮೀ ಹಣ ಬಂದ್ ಆಗುವುದಿಲ್ಲ. ಬಿಪಿಎಲ್ ಜೊತೆ ಎಪಿಎಲ್ ಕಾರ್ಡ್ದಾರರಿಗೂ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ,
ಇದನ್ನೂ ಓದಿ: ಬರೋಬ್ಬರಿ 22 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್: ಶಾಕಿಂಗ್ ಅಂಕಿಅಂಶ ಬಿಚ್ಚಿಟ್ಟ ಇ ಗವರ್ನೆನ್ಸ್ ಇಲಾಖೆ!