Video: ಗ್ವಾಟೆಮಾಲಾದಲ್ಲಿ ಸೇತುವೆಯಿಂದ ಕಂದಕಕ್ಕೆ ಉರುಳಿದ ಬಸ್, 55 ಮಂದಿ ಸಾವು

|

Updated on: Feb 11, 2025 | 7:57 AM

ಗ್ವಾಟೆಮಾಲಾ ರಾಜಧಾನಿಯ ಹೊರವಲಯದಲ್ಲಿ ಸೋಮವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 55 ಜನರು ಸಾವನ್ನಪ್ಪಿದ್ದಾರೆ. ಬಸ್ಸೊಂದು ಸೇತುವೆಯಿಂದ ಉರುಳಿ ಕಂದಕಕ್ಕೆ ಬಿದ್ದಿದೆ. ಘಟನಾ ಸ್ಥಳದಲ್ಲಿ 53 ಶವಗಳನ್ನು ಹೊರತೆಗೆಯಲಾಗಿದ್ದು, ಇಬ್ಬರು ಪ್ರಯಾಣಿಕರು ಸ್ಯಾನ್ ಜುವಾನ್ ಡಿ ಡಿಯೋಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕ ಸಚಿವಾಲಯದ ತನಿಖಾಧಿಕಾರಿಗಳು ತಿಳಿಸಿದ್ದಾರೆ. ಬೆಳಗಿನ ಜಾವದಲ್ಲಿ ಬಹು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆಯಿಂದ ಹೊರಟು ಸೇತುವೆಯ ಕೆಳಗಿನ ಕಡಿದಾದ ಕಮರಿಗೆ ಉರುಳಿತು.

ಗ್ವಾಟೆಮಾಲಾ ರಾಜಧಾನಿಯ ಹೊರವಲಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ 55 ಜನರು ಸಾವನ್ನಪ್ಪಿದ್ದಾರೆ. ಬಸ್ಸೊಂದು ಸೇತುವೆಯಿಂದ ಉರುಳಿ ಕಂದಕಕ್ಕೆ ಬಿದ್ದಿದೆ. ಘಟನಾ ಸ್ಥಳದಲ್ಲಿ 53 ಶವಗಳನ್ನು ಹೊರತೆಗೆಯಲಾಗಿದ್ದು, ಇಬ್ಬರು ಪ್ರಯಾಣಿಕರು ಸ್ಯಾನ್ ಜುವಾನ್ ಡಿ ಡಿಯೋಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಾರ್ವಜನಿಕ ಸಚಿವಾಲಯದ ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಬೆಳಗಿನ ಜಾವದಲ್ಲಿ ಬಹು ವಾಹನಗಳು ಡಿಕ್ಕಿ ಹೊಡೆದ ಪರಿಣಾಮ ಬಸ್ ರಸ್ತೆಯಿಂದ ಹೊರಟು ಸೇತುವೆಯ ಕೆಳಗಿನ ಕಡಿದಾದ ಕಮರಿಗೆ ಉರುಳಿತು. ಬಸ್ಸು 115 ಅಡಿ (35 ಮೀಟರ್) ಆಳದ ಕೊಳಚೆ ನೀರು ತುಂಬಿದ ಕಂದಕಕ್ಕೆ ತಲೆಕೆಳಗಾಗಿ ಬಿದ್ದು ಅರ್ಧ ಮುಳುಗಿತ್ತು. ಗ್ವಾಟೆಮಾಲಾ , ಮಧ್ಯ ಅಮೇರಿಕದ ಒಂದು ದೇಶ. ವಾಯುವ್ಯಕ್ಕೆ ಮೆಕ್ಸಿಕೊ, ನೈರುತ್ಯಕ್ಕೆ ಶಾಂತ ಮಹಾಸಾಗರ, ಈಶಾನ್ಯಕ್ಕೆ ಬೆಲೀಝ್ ಮತ್ತು ಕೆರಿಬ್ಬಿಯನ್ ಸಮುದ್ರ ಹಾಗೂ ಆಗ್ನೇಯಕ್ಕೆ ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ಗಳನ್ನು ಈ ದೇಶ ಹೊಂದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ