Gujarat Flood: ಗುಜರಾತ್ನಲ್ಲಿ ಭಾರೀ ಪ್ರವಾಹ; ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ಜೀವ ಉಳಿಸಿದ ಪೊಲೀಸ್
ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನು ಪೊಲೀಸ್ ಒಬ್ಬರು ಸ್ಥಳೀಯರ ಸಹಾಯದಿಂದ ಕಾಪಾಡಿರುವ ವಿಡಿಯೋ ವೈರಲ್ ಆಗಿದೆ.
ಗುಜರಾತ್ನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಭಾರೀ ಮಳೆಯಿಂದಾಗಿ ಗುಜರಾತ್ನಲ್ಲಿ (Gujarat Rain) ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹದ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರನನ್ನು ಪೊಲೀಸ್ ಒಬ್ಬರು ಸ್ಥಳೀಯರ ಸಹಾಯದಿಂದ ಕಾಪಾಡಿರುವ ವಿಡಿಯೋ ವೈರಲ್ (Video Viral) ಆಗಿದೆ. ಸೌರಾಷ್ಟ್ರದಲ್ಲಿ ಭಾರೀ ಮಳೆಯಿಂದಾಗಿ ದ್ವಾರಕಾ (Dwaraka) ಪ್ರವಾಹದಂತಹ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಆರೋಗ್ಯ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಖಂಬಲಿಯದ ಬೆಹ್ ಮತ್ತು ಬಾರಾದಲ್ಲಿ ಕಾಸ್‌ವೇಯಿಂದ ಹರಿಯುವ ನೀರಿನ ಪ್ರವಾಹದಲ್ಲಿ ಸಿಲುಕಿದ್ದ. ಪೊಲೀಸ್ ಮತ್ತು ಸ್ಥಳೀಯರ ಸಮಯಪ್ರಜ್ಞೆಯಿಂದ ಆ ಯುವಕನ ಪ್ರಾಣ ಉಳಿದಿದೆ. ಕಲ್ಯಾಣಪುರ ಮತ್ತು ದ್ವಾರಕಾದ ರಾವಲ್ ಪ್ರದೇಶದ ಹೊಲಗಳು ಕೆರೆಗಳಾಗಿ ಮಾರ್ಪಟ್ಟಿವೆ. ರೈತರು ತಮ್ಮ ಹೊಲಗಳಿಗೆ ಹೋಗಲು ದೋಣಿಗಳನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಇದೆ.