Gujarat Flood: ಗುಜರಾತ್​ನ ಪ್ರವಾಹದಲ್ಲಿ ಸಿಲುಕಿದ ಕಾರಿನ ಮೇಲೆ ಹತ್ತಿ ಕುಳಿತು ಹರಟೆ ಹೊಡೆದ ದಂಪತಿ

|

Updated on: Sep 09, 2024 | 9:47 PM

ಗುಜರಾತ್​ನ ಪ್ರವಾಹದಲ್ಲಿ 4 ಗಂಟೆಗಳ ಕಾಲ ಕಾರಿನ ರೂಫ್ ಮೇಲೆ ಶಾಂತವಾಗಿ ಕುಳಿತ ಗುಜರಾತ್ ದಂಪತಿಯನ್ನು ಕೊನೆಗೂ ರಕ್ಷಿಸಲಾಗಿದೆ. ಗುಜರಾತ್‌ನ ಸಬರ್ಕಾಂತದಲ್ಲಿ ಪ್ರವಾಹಕ್ಕೆ ಸಿಲುಕಿದ ನದಿಯಲ್ಲಿ ಸಿಲುಕಿದ್ದರೂ ಹರಟೆ ಹೊಡೆಯುತ್ತಾ ಆರಾಮಾಗಿ ಎಂಜಾಯ್ ಮಾಡುತ್ತಾ ಕುಳಿತ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಅಹಮದಾಬಾದ್: ಗುಜರಾತ್​ನ ಕಡಿಯದಾರ ಮತ್ತು ವಡಿಯವೀರ್ ಗ್ರಾಮಗಳ ನಡುವಿನ ಕರೋಲ್ ನದಿಯ ಮಧ್ಯೆ ಸಿಲುಕಿದ್ದ ಕಾರಿನ ರೂಫ್ ಮೇಲೆ ಹತ್ತಿ ಕುಳಿತ ದಂಪತಿ ಆರಾಮಾಗಿ ಹರಟೆ ಹೊಡೆಯುತ್ತಾ ಕುಳಿತಿರುವ ವಿಡಿಯೋ ವೈರಲ್ ಆಗಿದೆ. ಸುರೇಶ್ ಮತ್ತು ನೈನಾ ಮಿಸ್ತ್ರಿ ಅವರ ಕಾರು ಪ್ರವಾಹದ ನೀರಿನಲ್ಲಿ ಮುಳುಗಿತ್ತು. ನೀರಿನ ಮಟ್ಟ ಹೆಚ್ಚಾಗುತ್ತಿದ್ದಂತೆ ದಂಪತಿಗಳು ಕಾರಿನ ರೂಫ್ ಮೇಲೆ ಹತ್ತಿದರು. 4 ಗಂಟೆಗಳ ಬಳಿಕ ಅಗ್ನಿಶಾಮಕ ದಳದವರು ಹಗ್ಗಗಳನ್ನು ಬಳಸಿ ಆ ದಂಪತಿಯನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ