‘A’ ಸಿನಿಮಾದ ಭಾರಿ ಯಶಸ್ಸಿಗೆ ಕಾರಣವೇನು? ಗುರುಕಿರಣ್ ಹೇಳಿದ್ದು ಹೀಗೆ
‘A’ ಸಿನಿಮಾ ಬಿಡುಗಡೆ ಆದಾಗ ಸೂಪರ್ ಹಿಟ್ ಆಗಿತ್ತು, ಈಗ 26 ವರ್ಷಗಳ ಬಳಿಕ ಬಿಡುಗಡೆ ಆಗಿ ಮತ್ತೆ ಹಿಟ್ ಆಗಿದೆ. ಮರು ಬಿಡುಗಡೆ ಯಶಸ್ಸಿನ ಸಂಭ್ರಮ ಆಚರಿಸಲು ಚಿತ್ರತಂಡ ಒಂದಾಗಿತ್ತು. ಈ ಸಂದರ್ಭದಲ್ಲಿ ಗುರುಕಿರಣ್ ‘A’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.
ಉಪೇಂದ್ರ (Upendra) ನಿರ್ದೇಶನ ಮಾಡಿ, ನಾಯಕರಾಗಿಯೂ ನಟಿಸಿದ ಮೊದಲ ಸಿನಿಮಾ ‘A’ ಸಿನಿಮಾ ಬಿಡುಗಡೆ ಆಗಿ 26 ವರ್ಷಗಳಾಗಿವೆ. ಇತ್ತೀಚೆಗೆ ಮರು ಬಿಡುಗಡೆ ಆದ ಈ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದ್ದಾರೆ. ಚಿತ್ರತಂಡ ಒಟ್ಟಿಗೆ ಸೇರಿ ಈ ಮರು ಬಿಡುಗಡೆ ಯಶಸ್ಸನ್ನು ಸಂಭ್ರಮಿಸಿದೆ. ‘A’ ಸಿನಿಮಾ ಕನ್ನಡ ಚಿತ್ರರಂಗಕ್ಕೆ ಹಲವು ಪ್ರತಿಭಾವಂತರನ್ನು ನೀಡಿತು, ಅದರಲ್ಲಿ ಪ್ರಮುಖವಾದವರು ಸಂಗೀತ ನಿರ್ದೇಶಕ ಗುರುಕಿರಣ್. ‘A’ ಸಿನಿಮಾಕ್ಕೆ ಗುರುಕಿರಣ್ ನೀಡಿದ ಸಂಗೀತ ಅತ್ಯುತ್ತಮವಾದುದು. ಈಗಲೂ ಆ ಸಿನಿಮಾದ ಎಲ್ಲ ಹಾಡುಗಳು ಸೂಪರ್ ಹಿಟ್. ‘A’ ಸಿನಿಮಾಕ್ಕಾಗಿ ಅವಿತರ ಕೆಲಸ ಮಾಡಿದ್ದ ಗುರುಕಿರಣ್, ‘A’ ಸಿನಿಮಾ ಅಷ್ಟು ದೊಡ್ಡ ಹಿಟ್ ಆಗಲು ಕಾರಣವೇನು? ಎಂಬ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ