ಸಿಎಂ ಸಿದ್ದರಾಮಯ್ಯ ಕಾರಿಗೆ ಚಾಲಕನಾದ ಸಚಿವ ಭೈರತಿ ಸುರೇಶ್

ಸಿಎಂ ಸಿದ್ದರಾಮಯ್ಯ ಕಾರಿಗೆ ಚಾಲಕನಾದ ಸಚಿವ ಭೈರತಿ ಸುರೇಶ್

ಕಿರಣ್ ಹನುಮಂತ್​ ಮಾದಾರ್
|

Updated on: May 23, 2024 | 8:57 PM

ಮೈಸೂರಿನಲ್ಲಿ ಕೆಲವು ಸಮಯ ಸಿಎಂ ಕಾರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್(Byrathi Suresh) ಚಾಲಕನಾಗಿದ್ದರು. ಕಾರಿನ ಚಾಲಕನನ್ನು ಕೆಳಗಿಳಿಸಿ ತಾವೇ ಡ್ರೈವಿಂಗ್ ಮಾಡಿಕೊಂಡು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಯರಗನಹಳ್ಳಿಗೆ ಸಿಎಂ ಕಾರು ಡ್ರೈವ್ ಮಾಡಿದರು.

ಮೈಸೂರು, ಮೇ.23: ವಿವಿಧ ಕಾರ್ಯಕ್ರಮಗಳ ಭಾಗಿ ಹಿನ್ನಲೆ ಬೆಂಗಳೂರಿನಿಂದ ಮೈಸೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಇಂದು(ಮೇ.23) ಆಗಮಿಸಿದ್ದರು. ಈ ವೇಳೆ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳ ಮೈಸೂರಿನ ಯರಗನಹಳ್ಳಿಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ, ಮೃತರ ಕುಟುಂಬ ಸದಸ್ಯರಿಗೆ  ಸಾಂತ್ವನ ಹೇಳಿದರು. ಬಳಿಕ ದುರಂತದ ಬಗ್ಗೆ ಸಿಎಂ ಮಾಹಿತಿ ಪಡೆದುಕೊಂಡರು. ಇನ್ನು ಮೈಸೂರಿನಲ್ಲಿ ಕೆಲವು ಸಮಯ ಸಿಎಂ ಕಾರಿಗೆ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್(Byrathi Suresh) ಚಾಲಕನಾಗಿದ್ದರು. ಕಾರಿನ ಚಾಲಕನನ್ನು ಕೆಳಗಿಳಿಸಿ ತಾವೇ ಡ್ರೈವಿಂಗ್ ಮಾಡಿಕೊಂಡು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಯರಗನಹಳ್ಳಿಗೆ ಸಿಎಂ ಕಾರು ಡ್ರೈವ್ ಮಾಡಿದರು. ಈ ವೇಳೆ ಸ್ಥಳೀಯ ಶಾಸಕ ತನ್ವೀರ್ ಸೇಠ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಿಎಂಗೆ ಸಾಥ್ ನೀಡಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ