‘A’ ಸಿನಿಮಾದಲ್ಲಿ ಚಾಂದಿನಿ ನಾಯಕಿ ಮಾತ್ರವಲ್ಲ, ಮತ್ತೊಂದು ಜವಾಬ್ದಾರಿಯನ್ನೂ ನಿಭಾಯಿಸಿದ್ದರು
‘A’ ಸಿನಿಮಾದ ನಾಯಕಿ ಚಾಂದಿನಿ, ಸಿನಿಮಾದ ಮರು ಬಿಡುಗಡೆ ಯಶಸ್ಸು ಸಂಭ್ರಮಿಸಲು ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ಟಿವಿ9 ಜೊತೆ ಮಾತನಾಡಿದ ಚಾಂದಿನಿ, ‘A’ ಸಿನಿಮಾಕ್ಕೆ ನಾಯಕಿ ಆಗಿರುವ ಜೊತೆಗೆ ಬೇರೆ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾಗಿ ಹೇಳಿದರು.
ಉಪೇಂದ್ರ (Upendra) ನಿರ್ದೇಶನ ಮಾಡಿ, ನಾಯಕರಾಗಿಯೂ ನಟಿಸಿದ ಮೊದಲ ಸಿನಿಮಾ ‘A’ ಸಿನಿಮಾ ಬಿಡುಗಡೆ ಆಗಿ 26 ವರ್ಷಗಳಾಗಿವೆ. ಇತ್ತೀಚೆಗೆ ಮರು ಬಿಡುಗಡೆ ಆದ ಈ ಸಿನಿಮಾವನ್ನು ಪ್ರೇಕ್ಷಕರು ಮುಗಿಬಿದ್ದು ವೀಕ್ಷಿಸಿದ್ದಾರೆ. ಚಿತ್ರತಂಡ ಒಟ್ಟಿಗೆ ಸೇರಿ ಈ ಮರು ಬಿಡುಗಡೆ ಯಶಸ್ಸನ್ನು ಸಂಭ್ರಮಿಸಿದೆ. ‘A’ ಸಿನಿಮಾದ ಮರು ಬಿಡುಗಡೆ ಯಶಸ್ಸನ್ನು ಆಚರಿಸಲೆಂದು ನಟಿ ಚಾಂದಿನಿ ಮತ್ತೆ ಬೆಂಗಳೂರಿಗೆ ಬಂದಿದ್ದರು. ಈ ಸಂದರ್ಭದಲ್ಲಿ ‘A’ ಸಿನಿಮಾದ ಚಿತ್ರೀಕರಣದ ಹಲವು ಘಟನೆಗಳನ್ನು ಮೆಲುಕು ಹಾಕಿದರು. ಆಗಿನ್ನು ಯುವತಿಯಾಗಿದ್ದ ಚಾಂದಿನಿ, ‘A’ ಸಿನಿಮಾಕ್ಕೆ ನಾಯಕಿ ಮಾತ್ರವೇ ಅಲ್ಲದೆ, ವಸ್ತ್ರ ವಿನ್ಯಾಸಕಿಯೂ ಆಗಿದ್ದರಂತೆ. ಆಗಷ್ಟೆ ಹೀರೋ ಆಗಿದ್ದ ಉಪೇಂದ್ರಗೆ ಯಾವ ಬಟ್ಟೆಗಳನ್ನು ಹಾಕಿಕೊಳ್ಳಬೇಕು, ಯಾವುದು ತಮಗೆ ಸೂಟ್ ಆಗುತ್ತದೆ ಎಂಬುದು ಗೊತ್ತಾಗುತ್ತಿರಲಿಲ್ಲವಂತೆ. ಆಗ ಚಾಂದಿನಿಯೇ ಸಹಾಯ ಮಾಡಿ, ಅವರೇ ಬಟ್ಟೆಗಳನ್ನು ಆಯ್ಕೆ ಮಾಡಿ ನೀಡುತ್ತಿದ್ದರಂತೆ. ಆಗ ನಟ-ನಟಿಯರು ನಟನೆ ಜೊತೆಗೆ ಬೇರೆ ಜವಾಬ್ದಾರಿಗಳನ್ನೂ ನಿರ್ವಹಿಸಬೇಕಿತ್ತು’ ಎಂದು ನೆನಪು ಮಾಡಿಕೊಂಡಿದ್ದಾರೆ ಚಾಂದಿನಿ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ