ಮೊದಲ ಬಾರಿಗೆ ತಮ್ಮ ಒನ್‌ಸೈಡ್ ಲವ್ ಸ್ಟೋರಿ ರಿವೀಲ್ ಮಾಡಿದ ಸಿದ್ದರಾಮಯ್ಯ
ನನಗೂ ಅಂತರ್ಜಾತಿ ವಿವಾಹ ಆಗೋ ಆಸೆ ಇತ್ತು. ನಾನು ಕಾನೂನು ಓದುವಾಗ ಬೇರೆ ಜಾತಿ ಸ್ನೇಹಿತೆಯನ್ನು ಮದುವೆ ಆಗಬೇಕು ಎಂದುಕೊಂಡಿದ್ದೆ. ಆದರೆ ಆ ಹುಡುಗಿ ಮದುವೆಗೆ ಒಪ್ಪಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಕಾಲೇಜು ದಿನಗಳಲ್ಲಿ ತಮ್ಮ ಒನ್‌ಸೈಡ್ ಲವ್ ಸ್ಟೋರಿ ನೆನೆಪಿಸಿಕೊಂಡಿದ್ದಾರೆ.
ಮೈಸೂರು, (ಮೇ 23): ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರು ಇದೇ ಮೊಟ್ಟ ಮೊದಲ ಬಾರಿಗೆ ತಮ್ಮ ಕಾಲೇಜು ದಿನದ ಹುಡುಗಿಯೊಂದಿಗಿನ ಸ್ನೇಹದ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಮೈಸೂರಿನಲ್ಲಿಂದು ಜನ ಸ್ಪಂದನ ಮತ್ತು ಮಾನವ ಮಂಟಪ ಆಯೋಜಿಸಿದ್ದ ಅಂತರ್ಜಾತಿ ವಿವಾಹಿತರ ನೋಂದಣಿ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಾಷಣ ಮಾಡುವ ವೇಳೆ ತಮ್ಮ ಒನ್‌ಸೈಡ್ ಲವ್‌ಸ್ಟೋರಿಯನ್ನು (One Side Love Story) ಸಿದ್ದರಾಮಯ್ಯ ಬಚ್ಚಿಟ್ಟಿದ್ದಾರೆ. ನಾನು ಅಂತರ್ಜಾತಿ ಮದುವೆ ಮಾಡಿಕೊಳ್ಳಬೇಕು ಎಂದು ಆಸೆಪಟ್ಟಿದ್ದೆ. ನಾನು ಲಾ ಓದುವಾಗ ಒಂದು ಹುಡುಗಿ ಜೊತೆ ಸ್ನೇಹ ಇತ್ತು. ಆಕೆಯನ್ನು ಮದ್ವೆಯಾಗಬೇಕು ಎಂದುಕೊಂಡಿದ್ದೆ. ಆದ್ರೆ, ಹುಡುಗಿ ಒಪ್ಪಲಿಲ್ಲ ಹಾಗೇ ಆಕೆ ಮನೆಯವರೂ ಒಪ್ಪಲಿಲ್ಲ ಎಂದು ಆ ದಿನಗಳನ್ನು ನೆನೆದರು.
ಬಳಿಕ ಅದಕ್ಕೆ ಸ್ಪಷ್ಟನೆ ನೀಡಿದ ಸಿಎಂ. ಅದರ ಬಗ್ಗೆ ತಪ್ಪುತಪ್ಪಾಗಿ ಅಂದುಕೊಳ್ಳಬೇಡಿ. ಹುಡುಗಿ ಜೊತೆ ಸ್ನೇಹ ಇತ್ತು ಅಷ್ಟೇ ಎಂದು ತಮ್ಮ ಕಾಲೇಜು ದಿನದ ನೆನಪು ಮೆಲುಕು ಹಾಕಿದರು.
Latest Videos