ಇಡೀ ರಾಜ್ಯವನ್ನು ಸುತ್ತಿದಂತಹ ವ್ಯಕ್ತಿ ಎಚ್.ಡಿ.ದೇವೇಗೌಡರು: ಬಿಎಸ್ವೈ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಆರೋಗ್ಯವನ್ನು ವಿಚಾರಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು "ರಾಜ್ಯ ಸುತ್ತಿದ ಏಕೈಕ ವ್ಯಕ್ತಿ ದೇವೇಗೌಡರು" ಎಂದು ಬಣ್ಣಿಸಿದ್ದಾರೆ.
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ (H.D.Deve Gowda) ಅವರ ಆರೋಗ್ಯ (Health)ವನ್ನು ವಿಚಾರಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S.Yediyurappa) ಅವರು “ರಾಜ್ಯ ಸುತ್ತಿದ ಏಕೈಕ ವ್ಯಕ್ತಿ ದೇವೇಗೌಡರು” ಎಂದು ಬಣ್ಣಿಸಿದ್ದಾರೆ. ದೇವೇಗೌಡ ಅವರನ್ನು ಭೇಟಿಯಾದ ಬಳಿಕ ಹೇಳಿಕೆ ನೀಡಿದ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೆಗೌಡರನ್ನು ಒಂದು ತಿಂಗಳ ಹಿಂದೆಯೇ ನೋಡ ಬೇಕದಿಂದ್ದೆ. ಅವರು ಆನಾರೋಗ್ಯದಿಂದ ಇದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದರು. ನಾನು ಕಂಡಂತೆ ಇಡೀ ರಾಜ್ಯವನ್ನು ಸುತ್ತಿದಂತ ವ್ಯಕ್ತಿ ಇದ್ದರೆ ಅದು ದೇವೆಗೌಡರು. ಅವರು ಆರೋಗ್ಯದಿಂದ ಇರಲಿ ಅಂತಾ ದೇವರನ್ನು ಕೇಳಿಕೊಳ್ಳುತ್ತೇನೆ. ನಮ್ಮೆಲ್ಲರಿಗೂ ಅವರು ಮಾರ್ಗದರ್ಶಕರು. ಈಗಲೂ ಅವರಿಗೆ ಓಡಾಡಬೇಕೆಂಬ ಅಪೇಕ್ಷೆ ಇದೆ. ದೇವರ ಆಶೀರ್ವಾದದಿಂದ ಧೀಮಂತ ನಾಯಕ ದೇವೆಗೌಡರು ಅನೇಕ ವರ್ಷಗಳು ಇನ್ನೂ ಓಡಾಡಲಿ. ಭೇಟಿ ವೇಳೆ ಅನೇಕ ಸಂಗತಿಗಳು ನೆನಪುಮಾಡಿಕೊಂಡರು. ಮಂಡಿನೋವಿದೆ ಅಷ್ಟೇ, ಅವ್ರ ನೆನಪಿನ ಶಕ್ತಿ ಚೆನ್ನಾಗಿದೆ, ಹತ್ತಾರು ವರ್ಷ ಆರಾಮವಾಗಿ ಇರುತ್ತಾರೆ ಎಂದರು.
ಮತ್ತಷ್ಟು ವಿಡಿಯೋ ಸ್ಟೋರಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ