ಚಿಕ್ಕಮಗಳೂರು ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಆಲಿಕಲ್ಲು ಸಮೇತ ಜೋರು ಮಳೆ, ಜನರಲ್ಲಿ ಸಂತಸ
ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಚಿಕ್ಕಮಗಳೂರಲ್ಲೂ ಕಳೆದ ವರ್ಷ ಕೊರತೆ ಮಳೆಯಾಗಿತ್ತು. ಈ ಬಾರಿ ಬಿಸಿಲು ಸಹ ಸಾಮಾನ್ಯಕ್ಕಿಂತ ಹೆಚ್ಚು ತೀಕ್ಷ್ನವಾಗಿದೆ. ಹಾಗಾಗಿ, ಜನ ಮಳೆಯಾಗುವುದನ್ನು ಎದುರು ನೋಡುತ್ತಿದ್ದರು. ಚಿಕ್ಕಮಗಳೂರು ನಗರದಲ್ಲಿ ಮಳೆಯಿಂದ ಆಶ್ರಯ ಪಡೆಯಲು ಜನ ಅಂಗಡಿ ಮುಂಗಟ್ಟುಗಳ ಮುಂದೆ ನಿಂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು.
ಚಿಕ್ಕಮಗಳೂರು: ಮಳೆ ಬಂತೋ ಮಾರಾಯಾ ಗುಡಿ ಕಟ್ಟೋ ಶಿವರಾಯ ಅಂತ ಉತ್ತರ ಕರ್ನಾಟಕದ (North Karnataka) ಹಲವಾರು ಭಾಗಗಳಲ್ಲಿ ಮಕ್ಕಳು ಮಳೆ ಸುರಿಯತೊಡಗಿದಾಗ ಹಾಡುತ್ತಾ ಮಳೆಯಲ್ಲಿ ಆಡುತ್ತಾರೆ. ಮನೆ ಮುಂದೆ ಮರಳಿದ್ದರೆ, ಹಸಿ ಮರಳಲ್ಲಿ ಗೋಪುರ, ಗುಡಿಸಲು ಮತ್ತು ತಮಗೆ ತೋಚಿದ ಆಕೃತಿಗಳನ್ನು ರಚಿಸುತ್ತಾರೆ. ಮಳೆಯೆಂದರೆ ಮಕ್ಕಳಿಗೂ ಬಹಳ ಇಷ್ಟ ಮಾರಾಯ್ರೇ. ಚಿಕ್ಕಮಗಳೂರು ನಗರ (Chikmagalur city) ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಇವತ್ತು ಸಾಯಂಕಾಲ ಗುಡುಗು-ಮಿಂಚು ಮತ್ತು ಅಲಿಕಲ್ಲು (hailstorm) ಸಹಿತ ಜೋರು ಮಳೆಯಾಗಿದೆ. ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಚಿಕ್ಕಮಗಳೂರಲ್ಲೂ ಕಳೆದ ವರ್ಷ ಕೊರತೆ ಮಳೆಯಾಗಿತ್ತು. ಈ ಬಾರಿ ಬಿಸಿಲು ಸಹ ಸಾಮಾನ್ಯಕ್ಕಿಂತ ಹೆಚ್ಚು ತೀಕ್ಷ್ನವಾಗಿದೆ. ಹಾಗಾಗಿ, ಜನ ಮಳೆಯಾಗುವುದನ್ನು ಎದುರು ನೋಡುತ್ತಿದ್ದರು. ಚಿಕ್ಕಮಗಳೂರು ನಗರದಲ್ಲಿ ಮಳೆಯಿಂದ ಆಶ್ರಯ ಪಡೆಯಲು ಜನ ಅಂಗಡಿ ಮುಂಗಟ್ಟುಗಳ ಮುಂದೆ ನಿಂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ನಿನ್ನೆ ಬೆಂಗಳೂರು ನಗರದಲ್ಲೂ ಉತ್ತಮ ಮಳೆಯಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬೆಂಗಳೂರಿನಲ್ಲಿಂದು ಅರ್ಧ ಗಂಟೆ ಸುರಿದ ಮಳೆಗೆ ಬಿದ್ದ 25 ಮರಗಳು, ಎಲ್ಲೆಲ್ಲಿ ಏನಾಗಿದೆ? ಇಲ್ಲಿದೆ ವಿವರ