ಡಿಕೆ ಶಿವಕುಮಾರ ಬಲ ಅಂಗೈಯಲ್ಲಿ ಸಣ್ಣದಾಗಿ ಬಿರುಕು ಬಿಟ್ಟಿದ್ದ ಮೂಳೆ ಇನ್ನೂ ವಾಸಿಯಾದಂತಿಲ್ಲ
ಕೇವಲ ಎರಡೇ ಬೆರಳಲ್ಲಿ ಪೆನ್ನು ಹಿಡಿದು ಪೇಪರೊಂದರಲ್ಲಿ ಅವರು ಕಷ್ಟಪಟ್ಟು ನೋಟ್ಸ್ ಮಾಡಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.
ಬಳ್ಳಾರಿ: ಇತ್ತೀಚಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ಮನೆಯಲ್ಲಿ ನೆಲಕ್ಕೆ ಕೈಯೂರಿ ಮೇಲೇಳುವಾಗ ಬಲ ಅಂಗೈಯಲ್ಲಿ ಹೇರ್ ಲೈನ್ ಫ್ರ್ಯಾಕ್ಚರ್ (hairline) ಮಾಡಿಕೊಂಡ ಬಗ್ಗೆ ನಾವು ವರದಿ ಮಾಡಿದ್ದೇವೆ. ಅಂದು ಅವರಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಅಂಗೈಗೆಲ್ಲ ಬ್ಯಾಂಡೇಜ್ ಹಾಕಿದ್ದರು. ನಾಳೆ ಅಂದರೆ ಶನಿವಾರ ಬಳ್ಳಾರಿಯಲ್ಲಿ ರಾಹುಲ್ ಗಾಂಧಿ (Rahul Gandhi) ಬೃಹತ್ ಸಮಾವೇಶವನ್ನು ಉದ್ಘಾಟಿಸಲಿರುವ ಹಿನ್ನೆಲೆಯಲ್ಲಿ ಶಿವಕುಮಾರ ಸೇರಿದಂತೆ ಎಮ್ ಬಿ ಪಾಟೀಲ್, ಈಶ್ವರ್ ಖಂಡ್ರೆ ಮತ್ತು ಇನ್ನೂ ಹಲವಾರು ನಾಯಕರು ಪೂರ್ವಭಾವಿ ಸಭೆಯೊಂದನ್ನು ನಗರದಲ್ಲಿ ನಡೆಸಿದರು. ಈ ಸಂದರ್ಭದಲ್ಲಿ ಶಿವಕುಮಾರ ಬಲಗೈಯ ಎರಡು ಬೆರಳುಗಳಿಗೆ ಬ್ಯಾಂಡೇಜ್ ಇನ್ನೂ ಸುತ್ತಿರುವುದು ಕಾಣಿಸಿತು. ಕೇವಲ ಎರಡೇ ಬೆರಳಲ್ಲಿ ಪೆನ್ನು ಹಿಡಿದು ಪೇಪರೊಂದರಲ್ಲಿ ಅವರು ಕಷ್ಟಪಟ್ಟು ನೋಟ್ಸ್ ಮಾಡಿಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು.