AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು

‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು

ರಾಜೇಶ್ ದುಗ್ಗುಮನೆ
|

Updated on: Aug 22, 2026 | 9:51 AM

Share

Halli Power Reloaded: ಜೀ ಕನ್ನಡದ 'ಹಳ್ಳಿ ಪವರ್' ರಿಯಾಲಿಟಿ ಶೋ ಸ್ಪರ್ಧಿಗಳು ಇಷ್ಟು ದಿನ ತಂಗಿದ್ದ ಗ್ರಾಮಸ್ಥರ ಮನೆಗಳನ್ನು ತೊರೆದು 'ವಾಡೆ ಮನೆ'ಗೆ ಸ್ಥಳಾಂತರಗೊಂಡಿದ್ದಾರೆ. ಊರಿನವರು ಪ್ರೀತಿಯಿಂದ ಕಳುಹಿಸಿಕೊಟ್ಟ ಭಾವನಾತ್ಮಕ ಕ್ಷಣಗಳು ಹಾಗೂ ಅದ್ಧೂರಿ ಗೃಹಪ್ರವೇಶದ ಸಂಪೂರ್ಣ ವಿವರ ಇಲ್ಲಿದೆ.

ಜೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಹಳ್ಳಿ ಪವರ್ ರೀಲೋಡೆಡ್’ ದಿನದಿಂದ ದಿನಕ್ಕೆ ಪ್ರೇಕ್ಷಕರಲ್ಲಿ ಭಾರಿ ಕುತೂಹಲ ಮೂಡಿಸುತ್ತಿದೆ. ಇಷ್ಟು ದಿನ ಊರಿನ ಗ್ರಾಮಸ್ಥರ ಮನೆಗಳಲ್ಲೇ ತಂಗಿದ್ದು ಹಳ್ಳಿಯ ಸೌಂದರ್ಯ, ಸಂಸ್ಕೃತಿ ಹಾಗೂ ಜೀವನಶೈಲಿಯನ್ನು ಅನುಭವಿಸುತ್ತಿದ್ದ ನಗರದ ಸ್ಪರ್ಧಿಗಳು, ಇದೀಗ ಅಧಿಕೃತವಾಗಿ ‘ವಾಡೆ ಮನೆ’ಗೆ ಶಿಫ್ಟ್ ಆಗಿದ್ದಾರೆ.

ಊರಿನ ಪ್ರತಿಯೊಂದು ಕುಟುಂಬದಲ್ಲೂ ಒಂದಾಗಿ ಬೆರೆತಿದ್ದ ಸ್ಪರ್ಧಿಗಳಿಗೆ ಗ್ರಾಮಸ್ಥರು ಅತ್ಯಂತ ಪ್ರೀತಿಯಿಂದ ಆರತಿ ಬೆಳಗಿ, ದೃಷ್ಟಿ ತೆಗೆದು, ಹಾರೈಸಿದರು. ಹಿರಿಯರು ನೀಡಿದ ಪ್ರೀತಿ ಮತ್ತು ಕಳುಹಿಸಿಕೊಡುವಾಗ ಹರಿಸಿದ ಕಣ್ಣೀರು ಪ್ರತಿಯೊಬ್ಬರ ಕಣ್ಣಂಚನ್ನು ತೇವಗೊಳಿಸಿತು. ಪಂಚಮಿ ಹಬ್ಬದ ನೆನಪುಗಳನ್ನು ಹಂಚಿಕೊಳ್ಳುತ್ತಾ, ಪ್ರೀತಿಯಿಂದ ಉಡುಗೊರೆಗಳನ್ನು ಪಡೆದ ಸ್ಪರ್ಧಿಗಳು ಭಾವುಕರಾಗಿ ವಾಡೆ ಮನೆಯತ್ತ ಹೆಜ್ಜೆ ಇಟ್ಟರು.

ಹೇಗಿದೆ ಈ ವಾಡೆ ಮನೆ?

ಸಂಪ್ರದಾಯಬದ್ಧವಾಗಿ, ಪೂಜೆ ಪುನಸ್ಕಾರಗಳೊಂದಿಗೆ ಸ್ಪರ್ಧಿಗಳು ವಾಡೆ ಮನೆಗೆ ಗೃಹಪ್ರವೇಶ ಮಾಡಿದರು. ಈ ಮನೆ ಹಳ್ಳಿಯ ಗ್ರಾಮೀಣ ಶೈಲಿ ಹಾಗೂ ಗಂಭೀರತೆಯನ್ನು ಎತ್ತಿಹಿಡಿಯುವಂತಿದ್ದು, ಹಳೆಯ ಕಾಲದ ಕಲ್ಲಿನ ಗೋಡೆಗಳು ಹಾಗೂ ಕಟ್ಟಡದ ವಿನ್ಯಾಸ ಅತ್ಯಂತ ಆಕರ್ಷಕವಾಗಿದೆ.

ಇಷ್ಟು ದಿನ ಬೇರೆ ಬೇರೆ ಮನೆಗಳಲ್ಲಿದ್ದ ಸ್ಪರ್ಧಿಗಳೆಲ್ಲಾ ಈಗ ಒಂದೇ ಸೂರಿನಡಿ ವಾಡೆ ಮನೆಯಲ್ಲಿ ಇರಲಿದ್ದು, ಮುಂಬರುವ ದಿನಗಳಲ್ಲಿ ಸ್ಪರ್ಧೆ, ಪೈಪೋಟಿ ಹಾಗೂ ಮನರಂಜನೆ ಮತ್ತಷ್ಟು ರಂಗೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Follow Us