ನನಗಿಂತ ಸುಂದರವಾಗಿ ಕಾಣ್ತಿದ್ದಾರೆ ಅಂತಾ ಸ್ವಂತ ಮಗು ಸೇರಿ 4 ಮಕ್ಕಳನ್ನು ಕೊಂದ ಮಹಿಳೆ!

Updated on: Dec 04, 2025 | 4:25 PM

ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೊಂದು ಜನರನ್ನು ಬೆಚ್ಚಿಬೀಳಿಸಿದೆ. ತಾಯಿ-ಮಕ್ಕಳ ಬಾಂಧವ್ಯವೆಂಬುದು ಪ್ರಕೃತಿಯೇ ನೀಡಿದ ಅಪೂರ್ವ ಕೊಡುಗೆ. ಆದರೆ ಇಲ್ಲೊಬ್ಬ ತಾಯಿ ತನ್ನ ಸ್ವಂತ ಮಗುವನ್ನು ಸೇರಿದಂತೆ ಸಂಬಂಧಿಕರ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ನೌಲ್ತಾ ಗ್ರಾಮದ 32 ವರ್ಷದ ಪೂನಂ ಎಂಬ ಮಹಿಳೆ ಕಳೆದ ಎರಡು ವರ್ಷಗಳಲ್ಲಿ, ತನ್ನದೇ ಮೂರು ವರ್ಷದ ಮಗುವೂ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.

ಪಾಣಿಪತ್ (ಡಿಸೆಂಬರ್ 04): ಹರಿಯಾಣದ ಪಾಣಿಪತ್‌ನಲ್ಲಿ ನಡೆದ ಸರಣಿ ಕೊಲೆ ಪ್ರಕರಣವೊಂದು ಜನರನ್ನು ಬೆಚ್ಚಿಬೀಳಿಸಿದೆ. ತಾಯಿ-ಮಕ್ಕಳ ಬಾಂಧವ್ಯವೆಂಬುದು ಪ್ರಕೃತಿಯೇ ನೀಡಿದ ಅಪೂರ್ವ ಕೊಡುಗೆ. ಆದರೆ ಇಲ್ಲೊಬ್ಬ ತಾಯಿ ತನ್ನ ಸ್ವಂತ ಮಗುವನ್ನು ಸೇರಿದಂತೆ ಸಂಬಂಧಿಕರ ಮಕ್ಕಳನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾಳೆ. ನೌಲ್ತಾ ಗ್ರಾಮದ 32 ವರ್ಷದ ಪೂನಂ ಎಂಬ ಮಹಿಳೆ ಕಳೆದ ಎರಡು ವರ್ಷಗಳಲ್ಲಿ, ತನ್ನದೇ ಮೂರು ವರ್ಷದ ಮಗುವೂ ಸೇರಿದಂತೆ ನಾಲ್ಕು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಹತ್ಯೆ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಸದ್ಯ ನಾಲ್ಕು ಮಕ್ಕಳ ಕೊಲೆ ಆರೋಪದ ಮೇಲೆ ಆ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ಮಕ್ಕಳ ಸೌಂದರ್ಯದ ಬಗ್ಗೆ ತನಗಿದ್ದ ಅತಿಯಾದ ಅಸೂಯೆಯೇ ಈ ಕೊಲೆಗಳಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published on: Dec 04, 2025 04:23 PM