AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ವರ್ಕೌಟ್ ಮಾಡುತ್ತಿದ್ದಾಗ ಭುಜ ಟಚ್​​ ಆಗಿದ್ದಕ್ಕೆ ಯುವಕನ ತಲೆ ಜಜ್ಜಿದ ಕಿರಾತಕ!

ಹಾಸನ: ವರ್ಕೌಟ್ ಮಾಡುತ್ತಿದ್ದಾಗ ಭುಜ ಟಚ್​​ ಆಗಿದ್ದಕ್ಕೆ ಯುವಕನ ತಲೆ ಜಜ್ಜಿದ ಕಿರಾತಕ!

ಅಕ್ಷಯ್​ ಪಲ್ಲಮಜಲು​​
|

Updated on: May 14, 2026 | 8:03 AM

Share

ಹಾಸನದ ಎಂ.ಜೆ. ಫಿಟ್‌ನೆಸ್ ಜಿಮ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಭೀಕರ ಹಲ್ಲೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ವ್ಯಾಯಾಮದ ವೇಳೆ ಭುಜ ತಾಗಿದ್ದಕ್ಕೆ ವರುಣ್ ಎಂಬಾತ ಕೀರ್ತನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಕೀರ್ತನ್ ತಲೆಗೆ ಗಂಭೀರ ಪೆಟ್ಟಾಗಿ ಕೋಮಾಗೆ ಜಾರಿದ್ದು, ಐಸಿಯುನಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ವರುಣ್ ವಿರುದ್ಧ ಪ್ರಕರಣ ದಾಖಲಾಗಿದೆ.

ಹಾಸನ, ಮೇ,14: ಹಾಸನ ನಗರದ ‘ಎಂ.ಜೆ. ಫಿಟ್‌ನೆಸ್’ (M.J. Fitness) ಜಿಮ್‌ನಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ನಡೆದ ಭೀಕರ ಹಲ್ಲೆ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ವ್ಯಾಯಾಮ ಮಾಡುವಾಗ ಅಚಾತುರ್ಯದಿಂದ ಭುಜ ಟಚ್​​ ಆಗಿರುವುದು ದೊಡ್ಡ ಅಪರಾಧ ಎಂಬಂತೆ ವರ್ತಿಸಿದ ವರುಣ್ ಎಂಬಾತ, ಕೀರ್ತನ್ ಎಂಬ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಇಬ್ಬರ ನಡುವೆ ಸ್ವಲ್ಪ ಭುಜ ತಗಿದೆ. ಇದನ್ನೇ ನೆಪವಾಗಿಸಿಕೊಂಡ ವರುಣ್, ಕೋಪದಿಂದ ಕೀರ್ತನ್‌ನ ತಲೆಗೆ ಬಲವಾಗಿ ಒದ್ದಿದ್ದಾನೆ. ಇದರಿಂದ ಕೀರ್ತನ್ ತಲೆಗೆ ಗಂಭೀರ ಪೆಟ್ಟಾಗಿದ್ದು (Skull Fracture), ಆತ ಪ್ರಜ್ಞೆ ತಪ್ಪಿ ಕೋಮಾಗೆ ಜಾರಿದ್ದಾನೆ. ಗಾಯಾಳು ಕೀರ್ತನ್ ಪ್ರಸ್ತುತ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವರುಣ್ ವಿರುದ್ಧ ತನಿಖೆ ಆರಂಭವಾಗಿದೆ. ಕ್ಷಣಕಾಲದ ಆವೇಶ ಹೇಗೆ ಒಬ್ಬರ ಬದುಕನ್ನು ಮೂರಾಬಟ್ಟೆ ಮಾಡುತ್ತದೆ ಎಂಬುದಕ್ಕೆ ಈ ದುರ್ಘಟನೆಯೇ ಸಾಕ್ಷಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us