ಹಾಸನದಲ್ಲಿ 50 ರೂ. ಆಫರ್ ಶರ್ಟ್ಸ್ ಕೊಳ್ಳಲು ಮುಗಿಬಿದ್ದ ಜನರಿಗೆ ಬಿತ್ತು ಪೊಲೀಸರ್ ಲಾಠಿ ಏಟು
ಅಂಗಡಿ ಮಾಲೀಕರು ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಒಳ್ಳೊಳ್ಳೆ ಆಫರ್‌ಗಳನ್ನು ಕೊಡ್ತಿತ್ತಾರೆ. ಅದೇ ರೀತಿ ಹಾಸನದಲ್ಲಿ ಬಟ್ಟೆಯಂಗಡಿಯೊಂದು ನೀಡಿದ್ದ 50 ರೂ. ಗೆ 1 ಶರ್ಟ್ ಎಂಬ ಆಫರ್‌ಗೆ ಬಟ್ಟೆ ಕೊಳ್ಳಲು ಜನ ಮುಗಿಬಿದ್ದಿದ್ದಾರೆ. ನೂಕು ನುಗ್ಗಲು ಹೆಚ್ಚಾದ ಕಾರಣ ಜನರನ್ನು ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಹಾಸನ, ಸೆಪ್ಟೆಂಬರ್ 28: ಆಫರ್‌ನಲ್ಲಿ ಏನಾದ್ರೂ ಸಿಗುತ್ತೆ ಎಂದಾದ್ರೆ ನಮ್ಮ ಜನ ಪ್ರಾಣ ಪಣಕ್ಕಿಟ್ಟು ಬೇಕಾದ್ರೂ ಅದನ್ನು ಕೊಂಡುಕೊಳ್ಳುತ್ತಾರೆ. ಈ ಮಾತಿಗೆ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ನಡೆದಿದ್ದು, 50 ರೂ. ಆಫರ್ ಶರ್ಟ್‌ಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಈ ಘಟನೆ ಹಾಸನದ ಉದಯಗಿರಿ ಬಡಾವಣೆಯಲ್ಲಿ ನಡೆದಿದ್ದು, ಸಾವಿರಕ್ಕೆ 20 ಶರ್ಟ್ ಆಸೆಗೆ ಜನ ಬಟ್ಟೆ ಅಂಗಡಿಯ ಬಳಿ ಜಮಾಯಿಸಿದ್ದಾರೆ. ಕಬ್ಬಿಣದ ಬ್ಯಾರಿಕೇಟ್ ತಳ್ಳಿ ಜನ ನುಗ್ಗಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಲಾಠಿ ಚಾರ್ಜ್ ನಡೆಯುತ್ತಿದ್ದಂತೆ ಜನ ಎದ್ನೋ ಬಿದ್ನೋ ಅಂತ ಓಡಿ ಹೋಗಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
