ನಮ್ಮ ಸೊಸೆಯನ್ನು ಬಿಟ್ಟುಕೊಡಲ್ಲ: ಲವ್ ಜಿಹಾದ್ ಆರೋಪ ಕೇಸಿಗೆ ಟ್ವಿಸ್ಟ್ ಕೊಟ್ಟ ಮುಕಳೆಪ್ಪ ತಂದೆ
ಮುಕಳೆಪ್ಪ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಆತನ ತಂದೆ, ನಮಗೆ ಜೀವ ಬೆದರಿಕೆ ಬರುತ್ತಿದೆ. ಸಿಕ್ಕ ಸಿಕ್ಕ ಕಡೆಯಲ್ಲಿ ನನಗೆ ನನ್ನ ಕುಟುಂಬಕ್ಕೆ ಬೆದರಿಕೆಗಳು ಬರುತ್ತಿವೆ. ನನ್ನ ಸೊಸೆಗೆ ರಕ್ಷಣೆ ಕೊಡಿ ಎಂದು ಬೇಡಿಕೊಂಡಿದ್ದಾರೆ. ನಮ್ಮ ಸೊಸೆಯ ಧರ್ಮ ಬೇರೆಯಾದರೂ ಆಕೆ ನಮ್ಮ ಸೊಸೆಯೆ. ಎಲ್ಲರೂ ಆಕೆಯನ್ನು ಮುಕಳೆಪ್ಪನ ಹೆಂಡತಿಯೆಂದೇ ಕರೆಯುತ್ತಾರೆ. ನಾವು ನಮ್ಮ ಸೊಸೆಯನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲವೆಂದು ಹೇಳಿಕೆ ನೀಡಿದ್ದಾರೆ.
ಧಾರವಾಡ, ಸೆಪ್ಟೆಂಬರ್ 28: ಮುಕಳೆಪ್ಪ ಲವ್ ಜಿಹಾದ್ ಪ್ರಕರಣ ದಿನೇ ದಿನೇ ಹೊಸ ರೂಪ ಪಡೆದುಕೊಳ್ಳುತ್ತಿದೆ. ಇದೀಗ ಮುಕಳೆಪ್ಪ ಅಲಿಯಾಸ್ ಖ್ವಾಜಾ ಶಿರಹಟ್ಟಿಯ ತಂದೆ ಮೊಹಮ್ಮದ್ ಹನೀಫ್ ಶಿರಹಟ್ಟಿ ಪ್ರಕರಣದಲ್ಲಿ ಎಂಟ್ರಿಕೊಟ್ಟಿದ್ದು, ತನಗೆ ಮತ್ತು ತನ್ನ ಕುಟುಂಬದವರಿಗೆ ಜೀವ ಬೆದರಿಕೆ ಬರುತ್ತಿದೆ. ಇದರಿಂದ ನಮಗೆ ಹಾಗೂ ತನ್ನ ಸೊಸೆಗೆ ರಕ್ಷಣೆ ನಿಡಬೇಕಾಗಿಯೂ ಕೇಳಿಕೊಂಡಿದ್ದಾರೆ. ಜಾತಿ ಯಾವುದಾದರೂ ನಮ್ಮ ಸೊಸೆ ನಮ್ಮವಳೇ, ಆಕೆಯನ್ನು ಬಿಟ್ಟುಕೊಡುವುದಿಲ್ಲವೆಂದು ಖಡಕ್ ಆಗಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos

