ಹಾಸನದಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆ ಅನಾವರಣ; ಸಿದ್ದರಾಮಯ್ಯ ನೋಡಲು ಓಡಿ ಬಂದ ಅಭಿಮಾನಿಗಳು
ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆಯಲ್ಲಿ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆಯನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು. ಈ ವೇಳೆ ತಮ್ಮ ನೆಚ್ಚಿನ ನಾಯಕನನ್ನು ನೋಡಲು ಅಭಿಮಾನಿಗಳು ಓಡೋಡಿ ಬಂದರು.
ಹಾಸನ: ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಗುತ್ತಿನಕೆರೆಯಲ್ಲಿ ಸಂಗೊಳ್ಳಿ ರಾಯಣ್ಣನ ಕಂಚಿನ ಪ್ರತಿಮೆಯನ್ನು (Sangolli Rayanna Bronze statue) ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ಅನಾವರಣಗೊಳಿಸಿದರು. ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರಲು ನಿರ್ಧರಿಸಿದ ಬಳಿಕ ನಡೆಯುತ್ತಿರುವ ಬೃಹತ್ ಕಾರ್ಯಕ್ರಮ ಇದಾಗಿದ್ದು, ಅವರದ್ದೇ ನೇತೃತ್ವದಲ್ಲಿ ನಡೆಯುವ ಕಾರ್ಯಕ್ರಮವೂ ಹೌದು. ಅಲ್ಲದೆ ಸಿದ್ದರಾಮಯ್ಯ ಜೊತೆ ವೇದಿಕೆಯೂ ಹಂಚಿಕೊಂಡರು. ಈ ಕಾರ್ಯಕ್ರಮದಲ್ಲಿ ಭಾರೀ ಜನಸ್ತೋಮ ನೆರೆದಿದ್ದು, ತಮ್ಮ ನೆಚ್ಚಿನ ನಾಯರಾದ ಸಿದ್ದರಾಮಯ್ಯರನ್ನು ನೋಡಲು ಅಭಿಮಾನಿಗಳು ಓಡೋಡಿ ಬಂದ ಪರಿಣಾಮ ಸ್ಥಳದಲ್ಲಿ ನೂಕು ನುಗ್ಗಲು ನಡೆಯಿತು. ಪ್ರತಿಮೆ ಅನಾವರಣದ ನಂತರ ಮೆರವಣಿಗೆಗೆ ಹೊರಟ ಸಿದ್ದರಾಮಯ್ಯರನ್ನು ನೋಡಲು ಅಭಿಮಾನಿಗಳು ಹೊಲದ ಬೇಲಿ ನೆಗೆದು ಓಡಿ ಬಂದರು. ಪ್ರತಿಮೆ ಅನಾವರಣಕ್ಕೂ ಮುನ್ನ ಹೆಲಿಕಾಪ್ಟರ್ನಿಂದ ಇಳಿದು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಈ ವೇಳೆ ತಮ್ಮ ನಾಯಕನನ್ನ ನೋಡಲು ಅಭಿಮಾನಿಗಳು ಹೊಲದೊಳಗೆ ಓಡಿ ಬೇಲಿ ನೆಗೆದು ಧಾವಿಸಿ ಬಂದರು. ಸದ್ಯ ಅರಸೀಕೆರೆಯ ಗುತ್ತಿನಕೆರೆಯಲ್ಲಿ ಬೃಹತ್ ಬಹಿರಂಗ ಸಭೆ ನಡೆಯುತ್ತಿದ್ದು, ಶಾಸಕ ಶಿವಲಿಂಗೇಗೌಡ ಅವರು ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ