ಪಕ್ಷ ಮತ್ತು ರಾಜ್ಯದ ಎಲ್ಲ ವಿದ್ಯಮಾನಗಳನ್ನು ಜೆಪಿ ನಡ್ಡಾ ಅವರೊಂದಿಗೆ ಚರ್ಚಿಸಿದ್ದೇನೆ: ಬಸನಗೌಡ ಪಾಟೀಲ್ ಯತ್ನಾಳ್

|

Updated on: Jan 08, 2024 | 5:03 PM

ಕೇವಲ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಮಾತ್ರ ದೆಹಲಿ ವರಿಷ್ಠರೊಂದಿಗೆ ಮಾತಾಡುವ ಅವಕಾಶ ಸಿಗುತ್ತದೆ ಆದರೆ ತಮಗೆ ಅಪಾಯಿಂಟ್ಮೆಂಟ್ ಸಿಗಲ್ಲ ಎಂದು ತಾನು ಎತ್ತಿದ ಆಕ್ಷೇಪಣೆಯನ್ನು ನಡ್ಡಾ ಅವರು ಪರಿಗಣನೆಗೆ ತೆಗೆದುಕೊಂಡು, ಇನ್ನು ಮುಂದೆ ಹಾಗೆ ಅಗಲ್ಲ, ಎರಡು ದಿನ ಮುಂಚಿತವಾಗಿ ಫೋನ್ ಮಾಡಿಕೊಂಡು ನೇರವಾಗಿ ಬಂದು ಭೇಟಿಯಾಗಬಹುದು ಎಂದಿದ್ದಾರೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ವಿಜಯಪುರ: ಕಳೆದ ವಾರ ದೆಹಲಿಗೆ ಭೇಟಿ ನೀಡಿ ಕೆಲ ಪಕ್ಷದ ವರಿಷ್ಠರನ್ನು ಭೇಟಿಯಾಗಿ ಬಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರನ್ನು ವಿಜಯಪುರದ ಟಿವಿ9 ವರದಿಗಾರ ಮಾತಾಡಿಸಿದರು. ಹಿಂದಿನ ಬಿಎಸ್ ಯಡಿಯೂರಪ್ಪ (BS Yediyurappa) ಸರ್ಕಾರ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಿರುದ್ಧ ತಾನು ಮಾಡಿರುವ ಅರೋಪಗಳಿಗೆ ಹೈಕಮಾಂಡ್ ಯಾವುದೇ ನೋಟಿಸ್ ಅಥವಾ ಎಚ್ಚರಿಕೆ ನೀಡಿಲ್ಲ ಎಂದು ಯತ್ನಾಳ್ ಹೇಳಿದರು. ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಬೇರೆ ಬೇರೆ ಕೆಲಸಗಳಲ್ಲಿ ಬ್ಯೂಸಿಯಾಗಿದ್ದರಿಂದ ಅವರನ್ನು ಭೇಟಿಯಾಗುವುದು ಸಾಧ್ಯವಾಗಲಿಲ್ಲ, ಅದರೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಹಲವಾರು ವಿಷಯಗಳನ್ನು ಚರ್ಚಿಸಿರುವುದಾಗಿ ಅವರು ಹೇಳಿದರು. ತನ್ನ ಭೇಟಿಗೆ ಬರುವ ಮೊದಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ಅಗರವಾಲ್ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗೆ ಮಾತಾಡಿ ಎಲ್ಲ ವಿಷುಯಗಳನ್ಮು ಚರ್ಚಿಸಿ ಬರುವಂತೆ ನಡ್ಡಾ ಹೇಳಿದ್ದರಿಂದ ಅವರಿಬ್ಬರನ್ನು ಭೇಟಿಯಾದ ಬಳಿಕವೇ ಶುಕ್ರವಾರದಂದು ಅವರೊಂದಿಗೆ ಸುಮಾರು 25 ನಿಮಿಷಗಳ ಕಾಲ ಮಾತಾಡಿದ್ದಾಗಿ ಯತ್ನಾಳ್ ಹೇಳಿದರು. ತನ್ನೊಂದಿಗೆ ಮಾತಾಡಿದ ನಾಯಕರೆಲ್ಲ ಗೌರವಯುತವಾಗಿ ನಡೆಸಿಕೊಂಡರು ಎಂದು ಶಾಸಕ ಹೇಳಿದರು.

ಮತ್ತಷ್ಟು ವಿಡಿಯೋದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on