ಈ ಬಾರಿ ಟಿಕೆಟ್ ಸಿಗಲಾರದೆಂಬ ವದಂತಿ ಸಂಸದ ಪ್ರತಾಪ್ ಸಿಂಹರನ್ನು ಹತಾಶೆಯ ಮಡುವಿಗೆ ದೂಡಿದಂತಿದೆ!

|

Updated on: Mar 09, 2024 | 7:28 PM

ಎರಡು ಅವಧಿಗಳಲ್ಲೂ ಹಿಂದೂತ್ವ ಮತ್ತು ಅಭಿವೃದ್ಧಿ ಕೆಲಸಗಳೇ ತನ್ನ ದ್ಯೇಯಗಳಾಗಿದ್ದವು ಎಂದು ಅವರು ಹೇಳುತ್ತಾರೆ. ಸಂಸದನಾಗಿ ತಾನು ಮಾಡದ ಕೆಲಸ ಯಾವುದೂ ಇಲ್ಲ, ಇದಕ್ಕೆ ತನಗೆ ವೋಟು ನೀಡಿ ಗೆಲ್ಲಿಸಿದ ಜನರೇ ಸಾಕ್ಷಿಯಾಗಿದ್ದಾರೆ ಎನ್ನುವ ಸಂಸದ ಅಂತಿಮವಾಗಿ ಯಾರೇ ತನ್ನ ಕೈಬಿಟ್ಟರೂ ತಾಯಿ ಚಾಮುಂಡೇಶ್ವರಿ ಕೈ ಬಿಡಲ್ಲ ಎನ್ನುತ್ತಾರೆ.

ಮೈಸೂರು: ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ (Pratap Simha) ಆಡುವ ಮಾತಿನಲ್ಲಿ ಆತ್ಮವಿಶ್ವಾಸಕ್ಕಿಂತ ಜಾಸ್ತಿ ಹತಾಶೆ ಗೋಚರಿಸುತ್ತಿದೆ. ಈ ಬಾರಿ ಟಿಕೆಟ್ ಯದುವೀರ್ ಕೃಷ್ಣದತ್ ಒಡೆಯರ್ (Yaduveer Krishna Dutt Wodeyar) ಅವರಿಗೆ ಸಿಗುವ ವದಂತಿ ದಟ್ಟವಾಗುತ್ತಿದ್ದಂತೆಯೇ ಪ್ರತಾಪ್ ರಲ್ಲಿ ಚಡಪಡಿಕೆ, ಆತಂಕ (panic) ಶುರುವಾಗಿದೆ. ಟಿಕೆಟ್ ಮತ್ತು ಭವಿಷ್ಯ ನಿರ್ಧರಿಸುವವರು ಜನ, ಅವರನ್ನೊಮ್ಮೆ ಕೇಳಿದರೆ ಟಿಕೆಟ್ ಯಾರಿಗೆ ಸಿಗಬೇಕು ಅಂತ ಹೇಳುತ್ತಾರೆ ಎಂದು ಮೈಸೂರಲ್ಲಿ ಇಂದು ಮಾಧ್ಯಮಗಳ ಜೊತೆ ಮಾತಾಡುವಾಗ ಸಂಸದ ಹೇಳಿದರು. ಕರ್ನಾಟಕದಿಂದ ಕಳೆದ ಬಾರಿ ಲೋಕಸಭೆಗೆ ಆಯ್ಕೆಯಾದವರಲ್ಲಿ ಕೇವಲ ತೇಜಸ್ವೀ ಸೂರ್ಯ ಮಾತ್ರ ಮೊದಲ ಬಾರಿಗೆ ಸಂಸದರಾಗಿದ್ದರೆ ತಾನು ಎರಡನೇ ಬಾರಿಗೆ ಆಗಿದ್ದು, ಆದರೆ ಉಳಿದವರೆಲ್ಲ ಮೂರು, ನಾಲ್ಕು, ಐದಾರು ಬಾರಿ ಅಯ್ಕೆಯಾದವರು, ಹಾಗಾಗಿ ತನಗೆ ಮತ್ತೊಮ್ಮೆ ಸ್ಪರ್ಧಿಸುವ ಅವಕಾಶ ಸಿಗಬೇಕು ಎಂದು ಸಿಂಹ ಹೇಳುತ್ತಾರೆ. ನಂತರ ಅವರು ಸಂಸದನಾಗಿ ಕ್ಷೇತ್ರಕ್ಕೆ ಏನೇನು ಮಾಡಿದ್ದೇನೆ ಅಂತ ಹೇಳುತ್ತಾ ಹೊಗುತ್ತಾರೆ. ಎರಡು ಅವಧಿಗಳಲ್ಲೂ ಹಿಂದೂತ್ವ ಮತ್ತು ಅಭಿವೃದ್ಧಿ ಕೆಲಸಗಳೇ ತನ್ನ ದ್ಯೇಯಗಳಾಗಿದ್ದವು ಎಂದು ಅವರು ಹೇಳುತ್ತಾರೆ. ಸಂಸದನಾಗಿ ತಾನು ಮಾಡದ ಕೆಲಸ ಯಾವುದೂ ಇಲ್ಲ, ಇದಕ್ಕೆ ತನಗೆ ವೋಟು ನೀಡಿ ಗೆಲ್ಲಿಸಿದ ಜನರೇ ಸಾಕ್ಷಿಯಾಗಿದ್ದಾರೆ ಎನ್ನುವ ಸಂಸದ ಅಂತಿಮವಾಗಿ ಯಾರೇ ತನ್ನ ಕೈಬಿಟ್ಟರೂ ತಾಯಿ ಚಾಮುಂಡೇಶ್ವರಿ ಕೈ ಬಿಡಲ್ಲ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಪ್ರತಾಪ್ ಸಿಂಹ ಬೈ ಬರ್ತ್ ರೈಟರ್ ಇರಬಹುದು, ನಾನು ಫೈಟರ್: ಗುಡುಗಿದ ಪ್ರದೀಪ್ ಈಶ್ವರ್